Home ಜಿಲ್ಲೆ ಕಲಬುರಗಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

ಆಳಂದ: ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಮುಂಬರುವ ನ.1ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಧಿಕಾರಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಆಯುಕ್ತರಾಗಿ ಬಡ್ತಿ ಹೊಂದಿರುವ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿನಲ್ಲಿ ಗುರುವಾರ ಕನ್ನಡಪರ ಸಂಘಟನೆಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಕರೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದಿನಂತೆ ಉತ್ತಮ ವಾಗ್ಮಿಗಳನ್ನು ಆಮಂತ್ರಿಸಿ ಕನ್ನಡಪರ ಉಪನ್ಯಾಸ ವೇದಿಕೆಯ ಸಮಾರಂಭ ನಡೆಸಲು ಸಹಮತಿಸಬೇಕು ಎಂದು ಅವರು ಕೋರಿದರು.
ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ್, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಭೂನೋಂದಣಾಧಿಕಾರಿ ಶೃತಿ ಪಾಟೀಲ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪಗೊಳ, ಸಹಾಯಕ ಸಿಡಿಪಿಒ ಶಾಂತಾಬಾಯಿ, ಶಿಕ್ಷಣ ಇಲಾಖೆ ರಂಜನಾ ಕುಲಕರ್ಣಿ ಮತ್ತು ಪುರಸಭೆಯ ಆನಂದ ಕಾಶಿ, ಕಂ.ನೀ. ಶರಣಬಸಪ್ಪ ಹಕ್ಕಿ, ಆಕಾಶ ಸಜ್ಜನ್ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳಿದ್ದರು.
ಸಭೆಯಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡ ಮಹಾಂತೇಶ ಸಣ್ಣಮನಿ ಹಾಗೂ ರಮೇಶ ಜಗತಿ ಅವರು ಪ್ರತಿಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ನಾಡುನುಡಿ ಭಾಷೆ ಬಾಂಧವ್ಯದ ಕಾರ್ಯಕ್ರಮವನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಸಾಪ ಅಧ್ಯಕ್ಷ ಹಣಮಂತ ಶೇರಿ ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಇದು ಕಾಟಾಚಾರದ ಕಾರ್ಯಕ್ರಮವಾಗಬಾರದು ಎಂದು ಅವರು ಅಭಿಪ್ರಾಯ ಮಂಡಿಸಿದರು.
ಮುಖಂಡ ಆನಂದರಾಯ ಯಲಶೆಟ್ಟಿ, ಪ್ರವೀಣ ಮೊದಲೆ, ಹರಿಶರಣ ಜಗತಿ ಅನೇಕರು ಸಭೆಯಲ್ಲಿ ಹಾಜರಿದ್ದರು.