Home ಜಿಲ್ಲೆ 6 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ 3 ತಿಂಗಳಲ್ಲಿ ಪೂರ್ಣ:ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್

6 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ 3 ತಿಂಗಳಲ್ಲಿ ಪೂರ್ಣ:ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್

ವಿಜಯಪುರ, ಏ. 7 : ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ 6 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ನಡೆಸುವಂತೆ ಸಿಇಒ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್ ಹೇಳಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿರುವ 6 ವರ್ಷದ ಮಕ್ಕಳ ಸಂಖ್ಯೆ ಇದೆ. ಆದರೆ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿರುವ ಆರು ವರ್ಷದ ಮಕ್ಕಳ ಸಂಖ್ಯೆ ದತ್ತಾಂಶಗಳ ಸಂಗ್ರಹಣೆಯೇ ಇಲ್ಲ, ಕಳೆದ ಒಂದು ವರ್ಷದಿಂದ ಈ ನಿಖರವಾದ ದತ್ತಾಂಶ ಸಂಗ್ರಹಣೆ ಪ್ರಯತ್ನ ನಡೆಸಲಾಗುತ್ತಿದೆ, 100 ಮಕ್ಕಳು 6 ವರ್ಷದವರು ಇದ್ದರೆ ಅದರಲ್ಲಿ ಶಾಲೆಗೆ ಸೇರಿದ ಮಕ್ಕಳ ಸಂಖ್ಯೆ 80 ಇರಬಹುದು.
ಶಾಲೆಯಲ್ಲಿರುವ ಮಕ್ಕಳು ಹೊರತುಪಡಿಸಿ 6 ವರ್ಷದ ಮಕ್ಕಳ ಸಂಖ್ಯೆ ಇಲ್ಲಿಯವರೆಗೂ ಲಭ್ಯವಾಗಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಕೂಡಲೇ ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ ಈ ನಿಖರವಾದ ದತ್ತಾಂಶ ಸಂಗ್ರಹಣೆಗೆ ಅಗತ್ಯ ಕಾರ್ಯ ಯೋಜನೆ ರೂಪಿಸಿ ಎಂದು ಹೇಳಲಾಗಿದ್ದು, ಜಿಲ್ಲೆಯಲ್ಲಿ 3 ತಿಂಗಳಲ್ಲಿ ಈ ದತ್ತಾಂಶ ಸಂಗ್ರಹಣೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದು ಒಂದು ರೀತಿ ಪೈಲಟ್ ಪ್ರಾಜೆಕ್ಟ್ ರೀತಿಯಲ್ಲಿ ಈ ದತ್ತಾಂಶ ಸಂಗ್ರಹಣೆಯ ಕಾರ್ಯ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಠಾನ, ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುತ್ತಿರುವ ಬಗ್ಗೆ ಸುದೀರ್ಘವಾದ ಸಭೆ ನಡೆಸಿ ಸಂಬಂಧಿಸಿದ ಇಲಾಖೆಯ ಪರಾಮರ್ಶೆ ಮಾಡಲಾಗಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ರೀತಿಯ ಸಂದೇಶವನ್ನು ನೇರವಾಗಿ ಡಿಲೀಟ್ ಮಾಡುವ ಅಧಿಕಾರ ಪೆÇಲೀಸ್ ಇಲಾಖೆಗೆ ಇಲ್ಲ, ಫೆÇೀಸ್ಟ್ ಹಾಕಿದವರಿಗೆ ಈ ಕಂಟೆಂಟ್ ಡೀಲಿಟ್ ಮಾಡಿ ಎಂದು ಸೂಚನೆ ನೀಡುವ ಅಧಿಕಾರ ಇದೆ. ಈ ನಿಟ್ಟಿನಲ್ಲಿ ವಿಜಯಪುರ ಪೆÇಲೀಸರು ಉತ್ತಮವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಈ ರೀತಿ ಕಳೆದ ವರ್ಷದಲ್ಲಿ ಅಸಭ್ಯ ರೀತಿಯಲ್ಲಿ ಫೆÇೀಸ್ಟ್ ಮಾಡಲಾದ 21 ಫೆÇೀಸ್ಟ್ ಗಳನ್ನು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಈ ವರ್ಷ ಈಗಾಗಲೇ 21 ಫೆÇೀಸ್ಟ್ ಡಿಲೀಟ್ ಮಾಡಿಸಿದ್ದಾರೆ ಎಂಬ ಮಾಹಿತಿ ನೀಡಿದರು.
ಎಪ್ಲಾಯಿಮೆಂಟ್ ಪ್ಲಾಟ್‍ಫಾರ್ಮ್
ಉದ್ಯೋಗ ಕಲ್ಪಿಸುವ ಕಾರ್ಯಕ್ಕೂ ಆಯೋಗ ವಿಶೇಷ ಮುತವರ್ಜಿ ಹಾಗೂ ಈ ನಿಟ್ಟಿನಲ್ಲಿ ವಿಶೇಷ ಹೆಜ್ಜೆ ಇರಿಸಿದೆ. ಅಲ್ಪಸಂಖ್ಯಾತ ಆಯೋಗ ಉದ್ಯೋಗ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಿದೆ. ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯವೊಂದರ ಸಹಯೋಗದಲ್ಲಿ 200 ಕ್ಕೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ಸಾವಿರಾರು ಉದ್ಯೋಗಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಆದೇಶ ಪತ್ರ ಒದಗಿಸುವ ಕೆಲಸ ಮಾಡಲಾಗಿದ್ದು, ಉದ್ಯೋಗ ಮಾಹಿತಿ ಒದಗಿಸುವ ಎಂಪ್ಲಾಯಿಮೆಂಟ್ ಪ್ಲಾಟ್‍ಫಾರ್ಮ್ ರೂಪಿಸುವ ಕೆಲಸ ಮಾಡಲಾಗಿದೆ ಎಂದರು.
ಆಯೋಗದ ಜಾಲತಾಣವನ್ನು ಉದ್ಯೋಗ, ಜ್ಞಾನ ಮಾಹಿತಿ ನೀಡುವ ನಿಟ್ಟಿನಲ್ಲಿ ಸಮಗ್ರವಾಗಿ ರೂಪಿಸಲಾಗಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ನಿಟ್ಟಿನಲ್ಲಿಯೂ ಆಯೋಗ ಕಾರ್ಯೋನ್ಮುಖವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಈ ತರಬೇತಿಗೆ ಆದ್ಯತೆ ನೀಡಲಾಗಿದೆ ಎಂದರು.
ಕಳೆದ ಒಂದೂವರೆ ವರ್ಷದಿಂದ ಈ ಜವಾಬ್ದಾರಿ ವಹಿಸಿದ್ದು, ಸಾಮರಸ್ಯ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗಿದ್ದು, ಸರ್ವಧರ್ಮದ ಸಾಧಕರಿಗೆ ಸಾಧಕರಿಗೆ ಪ್ರಶಸ್ತಿ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಅಪೂರ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.
ಸಿಇಒ ರಿಷಿ ಆನಂದ, ಅಲ್ಪಸಂಖ್ಯಾತ ಇಲಾಖೆಯ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.