
ವಿಜಯಪುರ, ಏ. 9:ಬಸವ ಜಯಮೃತ್ಯುಂಜಯ ಸ್ವಾಮೀಜಿಯಿಂದ ಮಹಿಳೆ ಹಾಗೂ ಇತರರ ಮೇಲೆ ದೂರು ಕುರಿತು ನಾನು ಕಾಮೆಂಟ್ ಮಾಡಲ್ಲ. ಅದನ್ನು ಕಾನೂನು ನೋಡಿಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಮಹಿಳೆಯಿಂದ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ವಿಚಾರ ಕುರಿತು ಅವರು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಕಾನೂನು ಪ್ರಕಾರ ಕ್ರಮವಾಗಲಿ. ಸತ್ಯವೋ, ಅಸತ್ಯವೋ ಎನ್ನುವ ಬಗ್ಗೆ ತನಿಖೆ ಆಗಲಿ. ಕಾನೂನು ಕ್ರಮ ಕೈಗೊಳ್ಳುತ್ತದೆ. ನಮಗೂ ಇದಕ್ಕೂ ಸಂಬಂಧ ಇಲ್ಲ. ಇದರ ಬಗ್ಗೆ ನಾವು ಕಮೆಂಟ್ ಮಾಡಲು ಬರಲ್ಲ ಎಂದರು.
ಕಾನೂನು ಇದೆ. ಆ ಕಾನೂನು ಪ್ರಕಾರ ಸತ್ಯ, ಅಸತ್ಯ ಹೊರ ಬರಬೇಕು ಎಂದು ಅವರು ನುಡಿದರು.




















