
ತಾಳಿಕೋಟೆ:ಫೆ.೨೩: ಪಟ್ಟಣದ ಲೋಕಪಯೋಗಿ ಇಲಾಖೆಗೆ ಸಂಬAದಿತ ಪ್ರವಾಸಿ ಮಂದಿರದ ಒಳಗಡೆಯ ಜಾಗೆಯನ್ನು ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಅತೀಕ್ರಮಣ ಮಾಡಿಕೊಂಡು ಅಡುಗೆ ಮಾಡುವ ಶೇಡ್ ನಿರ್ಮಿಸಿಕೊಂಡಿದ್ದು ಕೂಡಲೇ ಅದನ್ನು ತೇವುಗೊಳಿಸಿ ಸರ್ಕಾರಿ ಜಾಗೆಯನ್ನು ಕಾಪಾಡಬೇಕೆಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಅವರು ಜಿಲ್ಲಾಧಿಕಾರಿಗೆ ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಶನಿವಾರರಂದು ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದ ಕಂಪೌAಡ ಒಳಗಡೆಯೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಣ್ಣಿಗೆ ಕಾಣುವಹಾಗೆಯೇ ಜಾಗೆಯನ್ನು ಅತೀಕ್ರಮಿಸಿ ರಾಜಾರೋಶವಾಗಿ ಅಡುಗೆ ಮಾಡುವ ಬೃಹತ್ ಶೇಡ್ ನಿರ್ಮಿಸಿಕೊಂಡು ಮಧುವೆ ಇನ್ನಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅಡುಗೆ ಮಾಡುವ ಕೆಲಸಕ್ಕೆ ಬಳೆಸಿಕೊಂಡು ಸಾಗಿದ್ದಾರೆ ಈ ಅಡುಗೆ ಮಾಡಲು ಶೇಡ್ ನಿರ್ಮಿಸಿಕೊಳ್ಳಲು ಲೋಕೊಪಯೋಗಿ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲಾ ಹಾಗೂ ಸುಮಾರು ೨೦೧೨ ರಿಂದ ಈ ಜಾಗೆಯನ್ನು ಉಪಯೋಗಿಸುತ್ತಿದ್ದ ಇಲ್ಲಿಯವರೆಗೂ ಕೂಡಾ ಯಾವುದೇ ಬಾಡಿಗೆಯನ್ನು ಕೂಡಾ ಇಲಾಖೆ ಸಂದಾಯ ಮಾಡಿರುವದಿಲ್ಲಾ ಈ ಕುರಿತು ಮಾಹಿತಿ ಹಕ್ಕಿನಡಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದಾಗ ಯಾವುದೇ ಬಾಡಿಗೆ ಮತ್ತು ಜಾಗೆ ಉಪಯೋಗಿಸಲಿಕ್ಕೆ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಗೆ ಅನುಮತಿ ನೀಡಿರುವದಿಲ್ಲಾವೆಂದು ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬAದಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಾಗೆ ಉಪಯೋಗಿಸಲು ಮತ್ತು ಯಾವುದೇ ಬಾಡಿಗೆ ಸಂದಾಯ ಆಗದಿರುವ ಕುರಿತು ನೀಡಿದ ವರಧಿಯ ಪ್ರತಿ ಮತ್ತು ಅತೀಕ್ರಮಣ ಮಾಡಿಕೊಂಡು ಉಪಯೋಗಿಸುತ್ತಿರುವ ಶೇಡ್ ಭಾವಚಿತ್ರದೊಂದಿಗೆ ಇದಕ್ಕೆ ಕಾರಣರಾದ ಪಿಡಬ್ಲುಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ೨೦೧೨ರಿಂದ ಪಿಡಬ್ಲುಡಿ ಪ್ರವಾಸಿ ಮಂದಿರದ ಜಾಗೆಯನ್ನು ಉಪಯೋಗಿಸುತ್ತಾ ಬಂದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಂದ ದಂಡ ಸಹೇತ ಕರವಸೂಲಿ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಹಾಗೂ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಅವರು ತಿಳಿಸಿದ್ದಾರೆ.



























