ಕೆಜಿಎಫ್:ಸೆ:೨೮: ನಗರಸಭೆ ಕಚೇರಿಯಲ್ಲಿ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗಣತಿ ಕಾರ್ಯಕ್ಕೆ ನೇಮಕ ಗೊಳಿಸಿರುವುದರಿಂದ ನಗರಸಭೆ ಕಚೇರಿಯಲ್ಲಿ ನಿತ್ಯ ನಡೆಯಬೇಕಾದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಕೋಲಾರ ಜಿಲ್ಲಾಧಿಕಾರಿ ಡಾ:ಎಂಆರ್.ರವಿ ರವರಿಗೆ ನಗರಸಭೆ ಸದಸ್ಯರು ದೂರು ನೀಡಿದರು.
ಕೆಜಿಎಫ್ ನಗರದಲ್ಲಿ ಗಣತಿ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ದಿಡೀರ್ ಎಂದು ಭೇಟಿ ನೀಡಿ ಸ್ವರ್ಣನಗರ ವಾರ್ಡ್‌ನ ಬಡಾವಣೆಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಂ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕೆಲವು ನಗರಸಭೆ ಸದಸ್ಯರು ಆಗಮಿಸಿ ನಗರಸಭೆಯಲ್ಲಿ ಜನನ ಮರಣ ಪ್ರಮಾಣ ಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಕೇಳಿದರೆ ಸಿಬ್ಬಂದಿಗಳು ಗಣತಿ ಕಾರ್ಯದಲ್ಲಿ ಇದ್ದಾರೆ ಎಂಬ ಉತ್ತರ ನೀಡುತ್ತಾರೆ ಇನ್ನು ಖಾತೆ ಲೈಸನ್ಸ್ ನೀಡುತ್ತಿಲ್ಲ ಕಸ ವಿಲೇವರಿಯಂತು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಒಟ್ಟಾರೆ ನಗರಸಭೆಯಲ್ಲಿ ಯಾವುದೇ ಕೆಲಸಗಳು ನಡೆಯದಿರುವುದರಿಂದ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ಮುಖ ಇಟ್ಟುಕೊಂಡು ಒಡಾಟ ನಡೆಸಲು ಸಾದ್ಯವಾಗುತ್ತಿಲ್ಲ ಎಂಬ ಅಳಲನ್ನು ತೊಡಿಕೊಂಡರು ಜನ ಗಣತಿ ಪ್ರಕ್ರಿಯೆಯಲ್ಲಿ ಕೆಲವು ಸಿಬ್ಬಂದಿ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಆದರೆ ಜನನ ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಯಾವುದೇ ಸಮಸ್ಯೆ ಇಲ್ಲ ಇಲ್ಲಿನ ಸಮಸ್ಯೆಗಳಿಗೆ ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು.
































