
ಯಾದಗಿರಿ:ಫೆ.೧೮: ತಾಲೂಕಿನ ಹೆಡಗಿಮದಾ ಗ್ರಾಮದಲ್ಲಿ ಮನೆಗೆ ಸಂಪರ್ಕಿಸುವ ಸಂಪ್ರದಾಯಬದ್ಧ ಸಂಚಾರ ದಾರಿಯನ್ನು ಅನಧಿಕೃತವಾಗಿ ಬಂದ್ ಮಾಡಿರುವುದಲ್ಲದೇ, ಸಂಬAಧಿತ ಅಧಿಕಾರಿಗಳು ದೂರುಗಳತ್ತ ನಿರ್ಲಕ್ಷ್ಯ ವಹಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಗ್ರಾಮದ ನಿವಾಸಿ ಶ್ರೀ ಶಿವಕುಮಾರ ತಂದೆ ಬುಗಪ್ಪ ಅವರು ತಮ್ಮ ಮನೆಗೆ ಹೋಗುವ ಪಾರಂಪರಿಕ ದಾರಿಯನ್ನು ದೌರ್ಜನ್ಯಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಸಂಬAಧಿತ ಆಡಳಿತಾತ್ಮಕ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸವಿಸ್ತಾರ ದೂರು ಸಲ್ಲಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮನೆ ನಂ. ೩-೩೦, ೩-೩೧ ಹಾಗೂ ಸರ್ವೆ ನಂ. ೧೨೭, ೧೨೬ಕ್ಕೆ ಸಂಬAಧಿಸಿದ ಭೂಸೀಮಾ ವಿವಾದ ವಿಚಾರವಾಗಿ ಭೂಮಾಪನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಸರ್ವೆ ನಡೆಸಿದ್ದರೂ, ಅಂತಿಮ ಗಡಿ ನಿರ್ಣಯ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ, ಗಡಿ ಕಲ್ಲುಗಳನ್ನು ಕಾನೂನುಬದ್ಧವಾಗಿ ಸ್ಥಾಪಿಸದೇ ಹಾಗೂ ಮನೆಗೆ ಹೋಗುವ ದಾರಿಯನ್ನು ಅಧಿಕೃತವಾಗಿ ಗುರುತಿಸಿ ನೀಡದೇ ಸ್ಥಳತ್ಯಾಗ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಚಾಂದವಾಶಾ ತಂದೆ ಖಾಜಾಸಾಬ್ ಅವರು ಪೂರ್ವದಲ್ಲಿ ಸ್ಥಾಪಿಸಲಾಗಿದ್ದ ಗಡಿ ಕಲ್ಲುಗಳನ್ನು ಕಿತ್ತಿಹಾಕಿ, ಸಂಪ್ರದಾಯಬದ್ಧ ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದಲ್ಲದೇ ಸಾರ್ವಜನಿಕ ಸಂಚಾರಕ್ಕೂ ಅಡಚಣೆ ಉಂಟುಮಾಡಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಕುಟುಂಬದ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಸಂಚಾರ ದುಸ್ತರವಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಸಾಮಾಜಿಕ ಬಹಿಷ್ಕಾರ ಹಾಗೂ ಜೀವಭದ್ರತಾ ಭೀತಿ ಎದುರಾಗಿರುವುದಾಗಿ ದೂರುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ೨೦೨೪ರಲ್ಲಿ ಜಾಗದ ವಿಚಾರಕ್ಕೆ ಸಂಬAಧಿಸಿದAತೆ ಹಲ್ಲೆ ಘಟನೆ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಅಔಒPಖಿ/UPಐಔಏ/ಉಐಃ/೧೧೭೫೨/೨೦೨೩ ಸಂಖ್ಯೆಯಡಿ ೧೮-೧೧-೨೦೨೩ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಕೇವಲ ಮೂರು ದಿನಗಳಲ್ಲೇ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ. ಆದರೂ ತಹಸೀಲ್ದಾರ್ ಹಾಗೂ ಪಿಡಿಓ ಅಧಿಕಾರಿಗಳು ಮೂರ್ನಾಲ್ಕು ಬಾರಿ ಸುಳ್ಳು ಮಾಹಿತಿ ನೀಡಿ ಸ್ಥಳ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಲೋಕಾಯುಕ್ತರಿಂದ ೨೨-೧೧-೨೦೨೪, ೦೭-೦೧-೨೦೨೫, ೧೦-೦೧-೨೦೨೫, ೨೫-೦೨-೨೦೨೫, ೦೪-೦೩-೨೦೨೫ ಹಾಗೂ ಕೊನೆಯದಾಗಿ ೧೭-೦೩-೨೦೨೬ರಂದು ಸೂಚನೆಗಳು ಜಾರಿಯಾಗಿದ್ದರೂ, ಸಲ್ಲಿಸಬೇಕಿದ್ದ ವರದಿ ಕಳುಹಿಸದೇ ಅಧಿಕಾರಿಗಳು ಮೌನ ವಹಿಸಿರುವುದು ಗಂಭೀರ ನಿರ್ಲಕ್ಷ್ಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಪ್ರದಾಯಬದ್ಧ ದಾರಿ ತೆರವು, ಗಡಿ ಕಲ್ಲು ಮರುಸ್ಥಾಪನೆ, ಅಕ್ರಮ ಅಡ್ಡಿಪಡಿಗಳ ತೆರವು, ಆರೋಪಿಯ ವಿರುದ್ಧ ಫೌಜ್ದಾರಿ ಕ್ರಮ ಹಾಗೂ ಸ್ಥಳ ಪರಿಶೀಲನೆ ವೇಳೆ ಪೊಲೀಸ್ ಭದ್ರತೆ ಒದಗಿಸುವಂತೆ ಆಗ್ರಹಿಸಲಾಗಿದೆ.
ಸಮಸ್ಯೆ ತಕ್ಷಣ ಪರಿಹಾರವಾಗದಿದ್ದಲ್ಲಿ ಮೇಲ್ದರ್ಜೆ ಅಧಿಕಾರಿಗಳನ್ನು ಸಂಪರ್ಕಿಸುವುದರೊAದಿಗೆ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಶಿವಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ.



























