Home ಜಿಲ್ಲೆ ಬೆಂಗಳೂರು ತಾಂತ್ರಿಕ ಯುಗದಲ್ಲೂ ಶಿಕ್ಷಣಕ್ಕೆ ಪೈಪೋಟಿ

ತಾಂತ್ರಿಕ ಯುಗದಲ್ಲೂ ಶಿಕ್ಷಣಕ್ಕೆ ಪೈಪೋಟಿ

ಬೆಂಗಳೂರು, ಆ೨೪: ಪ್ರಪಂಚವು ತಾಂತ್ರಿಕ ಯುಗದಲ್ಲಿ ಪೈಪೋಟಿಯ ನಡುವೆಯೂ, ಶಿಕ್ಷಣ ಪಡೆಯಲು ತೀವ್ರ ಪೈಪೋಟಿ ಇದ್ದು, ಎಲ್ಲರಲ್ಲಿಯೂ ಸ್ಪರ್ಧೆ ಏರ್ಪಟ್ಟಿದ್ದು, ತಾಂತ್ರಿಕತೆ, ವೈದ್ಯಕೀಯದಲ್ಲಿಯೂ ಅಮೇರಿಕ ಇನ್ನಿತರ ರಾಷ್ಟ್ರಗಳು ಹೆಸರು ಮಾಡಿದ್ದರೆ, ಭಾರತೀಯ ವೈದ್ಯರು, ವಿಜ್ಞಾನಿ, ಎಂಜಿನಿಯರ್‌ಗಳಿಂದ ಮಾತ್ರ ಸಾಧ್ಯ ಎಂಬುದನ್ನು ನಾವೆಲ್ಲರೂ ತಿಳಿಯಬೇಕು ಎಂದು ಪಾಂಡಿಚೇರಿ ಬಾಲಾಜಿ ವಿದ್ಯಾಪೀಠ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಕೃಷ್ಣ.ಪಿ.ಶೆಟ್ಟಿ ಹೇಳಿದರು.


ಮಲ್ಲತ್ತಹಳ್ಳಿಯ ಜೆ.ಎಸ್ ಪಿಯು, ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ ೯೦ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ನೀಡಿದ ಪ್ರತಿಭಾಪುರಸ್ಕಾರ,ನಗದು ಬಹುಮಾನ ಹಾಗೂ ವಿವಿಧ ಕೋರ್ಸ್‌ಗಳಲ್ಲಿ ಗೋಲ್ಡ್ ಮೆಡಲಿಸ್ಟ್ ಗಳಿಗೂ ಪ್ರತಿಭಾಪುರಸ್ಕಾರ ವಿತರಿಸಿ ಮಾತನಾಡಿ ಭಾರತೀಯ ವೈದ್ಯ, ವಿಜ್ಞಾನಿ, ಎಂಜಿನಿಯರ್‌ಗಳಿಂದ ಅವರು ಹೆಸರು ಗಳಿಸಿದ್ದಾರೆ. ಕೆಲಸ, ಶ್ರಮ, ಪ್ರತಿಭೆ ನಮ್ಮದು, ಹೆಸರು ಅಮೇರಿಕಾದ್ದು. ನಮ್ಮ ಎಂಜಿನಿಯರ್, ವೈದ್ಯರು ಭಾರತದಲ್ಲಿಯೇ ವೃತ್ತಿ ಮಾಡಿ ಹೆಸರು ಮಾಡಬೇಕು ಎಂದು ಕರೆ ನೀಡಿದ್ದರು.


ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಮಾತನಾಡಿ ಕಾಲೇಜು ಶಿಕ್ಷಣ ಅತ್ಯಂತ ಪವಿತ್ರ,ಭವಿಷ್ಯದ ಬುನಾದಿ.ನಮ್ಮ ಜವಾಬ್ದಾರಿ ಅರಿತು,ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯ ನಡುವೆಯೂ ಹೊಸ ವಿಚಾರ, ಆವಿಷ್ಕಾರಗಳನ್ನು ನಿರಂತರವಾಗಿ ಅಭ್ಯಾಸ,ತಾಳ್ಮೆ,ಕಠಿಣ ಶ್ರಮ ಹಾಕಿ ಉನ್ನತ ಶಿಕ್ಷಣ ಪಡೆಯಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.


ರ್‍ಯಾಂಕ್ ಪಡೆದರೆ ಸಾಲದೂ,ನಮ್ಮ ಪೋಷಕರು,ಶಿಕ್ಷಣ ಸಂಸ್ಥೆ,ಸಮಾಜಕ್ಕೆ ಗೌರವ ತರುವಂತಹ ಪ್ರಜೆಗಳಾಗ ಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ಜೀವನ ಸಾಗಿಸಬೇಕು.ಇಡೀ ಬಡಾವಣೆ, ಕುಟುಂಬಕ್ಕೆ ಹೆಸರು ತರುವಂತಹ ನಾಯಕತ್ವ ಬೇಕಾಗಿದೆ ಎಂದರು.


ಜೆ.ಎಸ್.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಯರಾಮಶೆಟ್ಟಿ.ಎಸ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹೆಚ್ಚು ಅಂಕ ಪಡೆಯುವ ಮೂಲಕ ಸಂಸ್ಕಾರಯುತ,ಕೌಶಲ್ಯ ಉಳ್ಳ,ಆಧುನಿಕ ತಂತ್ರಜ್ಞಾನ ಪೈಪೋಟಿಗೆ ಸವಾಲು ಒಡ್ಡುವ ರೀತಿಯಲ್ಲಿ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಜೆಎಸ್ ಸಂಸ್ಥೆ ಈ ವರ್ಷ ೪೬ ರ್‍ಯಾಂಕ್‌ನೀಟ್ ಪರೀಕ್ಷೆಯಲ್ಲಿ ೬೭ ವಿದ್ಯಾರ್ಥಿಗಳು ಶೇ ೪೯೮ ಅಂಕ ಪಡೆದರೆ,ದ್ವಿತೀಯ ಪಿಯುಸಿ ಶೇ ೯೦ರಷ್ಟು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು,ಇಂದು ಪ್ರತಿಭಾ ಪುರಸ್ಕಾರ,ಪ್ರಶಸ್ತಿ,ತಲಾ ೭ ಸಾವಿರ,೫ ಸಾವಿರ ನೀಡಿ ಗೌರವಿಸಲಾಗುತ್ತಿದೆ ಎಂದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೊ.ಪ್ರತಿಭಾ ಕಳಸ್, ಪಿಯು ಕಾಲೇಜು ಪ್ರಾಂಶುಪಾಲ ವಿಜಯ್‌ಕುಮಾರ್ ಎನ್.ಕೆ, ಕಾರ್ಯದರ್ಶಿ ನರಸಿಂಹ.ಜೆ.ಶೆಟ್ಟಿ ಉಪಸ್ಥಿತರಿದ್ದರು.