ಕಲಬುರಗಿ : ಭಾರತ ದೇಶದ ಏಕತಾ ಪುರುಷ್ಯ, ದೇಶದ ಮೊದಲನೇ ಉಪಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ ಭಾಯಿ ಪಟೇಲರ ಜನ್ಮದಿನದಂದು ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಲ್ಲಿ ಪ್ರತಿ ವರ್ಷ 31ನೇ ಅಕ್ಟೋಬರದಂದು ಅಧಿಕೃತವಾಗಿ ಸರ್ಕಾರದಿಂದಲೇ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮದಿನಾಚರಣೆ ಆಚರಿಸಲು ಸರ್ಕಾರ ತಕ್ಷಣ ಪರಿಗಣಿಸಲು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಜಯಂತೋತ್ಸವ ಸಮಿತಿ ಮತ್ತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ
ಡಾ. ಲಕ್ಷ್ಮಣ ದಸ್ತಿಯವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ದಿನಾಂಕ : 31.10.2026 ರಂದು ಕಲಬುರಗಿಯ ಸರ್ದಾರ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಉಕ್ಕಿನ ಮನುಷ್ಯ ಪಟೇಲರ ಜಯಂತ್ಯೋತ್ಸವ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದ ಸಮಿತಿಯ ನಾಯಕರು ಭಾರತ ದೇಶದ 556 ಸಂಸ್ಥಾನಿಕ ರಾಜರನ್ನು ಮನವೊಲಿಸಿ ಕೆಲವು ರಾಜ್ಯಗಳಿಗೆ ದಿಟ್ಟತನದ ಧೋರಣೆಯನ್ನು ಅನುಸರಿಸಿ ಪ್ರಸ್ತುತ ವಿಶಾಲ ಭಾರತ ನಿರ್ಮಾಣಕ್ಕೆ ಕಾರಣರಾದ ಸರ್ದಾರ ವಲ್ಲಭ ಭಾಯಿ ಪಟೇಲರವರನ್ನು ಭಾರತದ ಪ್ರತಿಯೊಬ್ಬ ನಾಗರಿಕರು ನೆನೆಸುವುದು ಕರ್ತವ್ಯವಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ನಾಗರಿಕರು ಸರ್ದಾರ್ ಪಟೇಲರಿಗೆ ಗರ್ವದಿಂದ ಮತ್ತು ಸ್ವಾಭಿಮಾನದಿಂದ ನೆನೆಸುವುದಷ್ಟೇ ಅಲ್ಲದೆ ಅವರ ಜನ್ಮ ದಿನವನ್ನು ಸಾರ್ವತ್ರಿಕವಾಗಿ ಆಚರಣೆ ಮಾಡುವುದು ಅವಶ್ಯವಾಗಿದೆ. ಇದರಿಂದ ನಮ್ಮ ಯುವ ಪೀಳಿಗೆಗೆ ನಮ್ಮ ಪ್ರದೇಶದ ನಿಜವಾದ ಇತಿಹಾಸ ಪರಿಚಯವಾಗುತ್ತದೆ. ಹೈದ್ರಾಬಾದ ಸಂಸ್ಥಾನ ಭಾರತದಲ್ಲಿ ತಕ್ಷಣ ವಿಲೀನವಾಗಲು ನಿರಾಕರಿಸಿದ ಸಂದರ್ಭದಲ್ಲಿ ಆಗಿನ ಗೃಹ ಸಚಿವರಾದ ಸರ್ದಾರ್
ವಲ್ಲಭ ಭಾಯಿಪಟೇಲರವರು ಆಗಿನ ಕಾನೂನು ಮಂತ್ರಿಗಳಾದ ಡಾ. ಬಾಬಾ ಸಾಹೇಬ ಅಂಬೇಡ್ಕರರವರ ಕಾನೂನಾತ್ಮಕ ಸಲಹೆಯಂತೆ ಆಪರೇಶನ್ ಪೆÇೀಲೋ ನಡೆಸಿರುವುದರಿಂದ 1948 ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಸೇರಿದಂತೆ, ತೆಲಂಗಾಣ ಮತ್ತು ಮರಾಠವಾಡಾಕ್ಕೆ ಭಾರತದಲ್ಲಿ ವಿಲೀನವಾಗುವ ಭಾಗ್ಯ ದೊರಕಿತು. ಇಂತಹ ಐತಿಹಾಸಿಕ ದಿನವನ್ನು ಕಲ್ಯಾಣದ ಜನರು ಮರೆತರೆ, ನಮ್ಮತ್ವವನ್ನು ನಾವು ಮರೆತಂತೆ ಆಗುತ್ತದೆ. ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಸೇರಿದಂತೆ, ಕಲ್ಯಾಣದ ಸಚಿವರು, ಸಂಸದರು, ಶಾಸಕರು, ಸರ್ದಾರ್ ಪಟೇಲರವರ ಜನ್ಮ ದಿನ ಕಲ್ಯಾಣ ಕನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸರಕಾರದಿಂದ ಅಧಿಕೃತವಾಗಿ ಆಚರಣೆಗೆ ಗಂಭೀರವಾಗಿ
ಪರಿಗಣಿಸಿ ಅನುಷ್ಠಾನಕ್ಕೆ ತರಲು ಹೋರಾಟ ಸಮಿತಿಯ ಮುಖಂಡರು ಆಗ್ರಹಿಸಿದರು.
ಅದರಂತೆ, ಕಲಬುರಗಿ ಮಹಾನಗರದ ಕೇಂದ್ರ ಸ್ಥಾನದಲ್ಲಿರುವ ಸರ್ದಾರ ವಲ್ಲಭಭಾಯಿ ಪಟೇಲರ ಪ್ರತಿಮೆ ಅನಾವರಣಗೊಂಡು
ಸುಮಾರು 28 ವರ್ಷಗಳು ಗತಿಸಿವೆ. ಪಟೇಲ್ ವೃತ್ತದ ನವೀಕರಣ ಮತ್ತು ಆಧುನಿಕರಣದ ಜೊತೆಗೆ ಉಕ್ಕಿನ ಮನುಷ್ಯ ಸರ್ದಾರ ಪಟೇಲರ ಪ್ರತಿಮೆಯು ಸಹ ವೃತ್ತದ ಆಕಾರಕ್ಕೆ ಪೂರಕವಾಗಿ ಪ್ರತಿಮೆಯ ನವಿಕರಣ ಕಾಮಗಾರಿ ಜರುಗುವುದು ಅತಿ ಅವಶ್ಯವಾಗಿದೆ. ಈ ವಿಷಯಕ್ಕೆ ಸಂಬಂದಿಸಿ ರಾಜ್ಯದ ಗೃಹ ಸಚಿವರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಈಗಾಗಲೆ ಮನವರಿಕೆ ಮಾಡಲಾಗಿದೆ. ಇದಕ್ಕೆ ವಿಶೇಷ ಮುತುವರ್ಜಿ ವಹಿಸಿ ಬರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪೂರ್ವದಲ್ಲಿ ಪಟೇಲರ ವೃತ್ತದ ನವಿಕರಣ ಕಾರ್ಯ ಕೈಗೊಳ್ಳಲು ಸಮಿತಿಯ ಮುಖಂಡರು ಈ ಜಯಂತ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿಯವರು ಮಾತನ್ನಾಡಿ ಭಾರತ ದೇಶದ ಏಕತೆಗೆ ಸರ್ದಾರ್ ವಲ್ಲಭಭಾಯ್ ಪಟೇಲರ ಕೊಡುಗೆ ಅಪಾರವಾಗಿದೆ.
ಪ್ರಸ್ತುತ ದಿನಗಳಲ್ಲಿ ನಮ್ಮ ಯುವ ಪೀಳಿಗೆಗೆ ಪಟೇಲರ ಕೊಡುಗೆ ಬಗ್ಗೆ ಮತ್ತು ದೇಶದ ಅಖಂಡತೆ ಹಾಗೂ ರೈತರ ಅಭಿವೃದ್ಧಿ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಯ ಧೋರಣೆ ಕುರಿತು ಅವರ ಸಿದ್ಧಾಂತ ತತ್ವಗಳು ಅರಿಯುವುದು ಅತಿ ಅವಶ್ಯವಾಗಿದೆ ಎಂದು ಹೇಳಿದ ಅವರು, ಮುಂದುವರಿದು ಅವರು ಹೋರಾಟ ಸಮಿತಿಯ ಮುಖಂಡರು ಪ್ರಸ್ತಾಪಿಸಿದಂತೆ ಬರುವ ದಿನಗಳಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರದಿಂದ ಅಧಿಕೃತವಾಗಿ ಆಚರಣೆ ಮಾಡುವುದು ಅವಶ್ಯವಾಗಿದೆ ಈ ಬಗ್ಗೆ ಕಲ್ಯಾಣ ಕರ್ನಾಟಕದ ಎಲ್ಲಾ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತರುವುದು ಅವಶ್ಯವಾಗಿದೆ.ಈ ಬಗ್ಗೆ ತಾವು ವಿಶೇಷ ಕಾಳಜಿ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪರಿಣಿತ ತಜ್ಞರು ಮತ್ತು ಸಮಿತಿಯ ಕ್ರಿಯಾ ಸದಸ್ಯರುಗಳಾದ ಮನೀಷ್ ಜಾಜು, ಅಣ್ಣಾರಾವ ಧುತ್ರುರಗಾಂವ, ಬಸವರಾಜ ಗುಲಶೆಟ್ಟಿ, ಗಾಂಧೀಜಿ ಮೋಳಕೇರಿ, ರಾಜೇ ಶಿವಶರಣ, ಎಂ.ಬಿ. ನಿಂಗಪ್ಪ, ಮಲ್ಲಿಕಾರ್ಜುನ ಭೂಸನೂರ, ಅರುಣಕುಮಾರ ಕುಲಕರ್ಣಿ, ದೇವಿದಾಸ ಕಾಂಬಳೆ ,
ಸೈಯದ್ ರೌಫ ಖಾದ್ರಿ,ಸದಾನಂದ ಪೆರ್ಲ, ಗಾಂಧೀಜಿ ಮಜೋಳಕೇರಿ, ಅಬ್ದುಲ್ ಗನಿ, ಶಾಂತಪ್ಪ ಕಾರಬಸಗಿ, ಕೈಲಾಸನಾಥ ದೀಕ್ಷಿತ್, ಅಣ್ಣಾರಾಯ ಹೆಬ್ಬಾಳ, ಬಾಬಾ ಫಕ್ರೋದ್ದಿನ್,
ಉದಯಕುಮಾರ್ ಜೇವರ್ಗಿ, ಮುತ್ತಣ್ಣ ನಡಗೇರಿ ಮಹಾದೇವಪ್ಪ,ಸಂಧ್ಯಾರಾಜ ಸ್ಯಾಮ್ಯುಯೆಲ್,ಭೀಮಶೆಟ್ಟಿ ಮುಕ್ಕಾ, ಗೌತಮ್ ಕಾಂಬಳೆ,ಬಸವರಾಜ ಕಲ್ಯಾಣಿ, ಶಿವಾನಂದ ಕಾಂದೆ, ಮಳಾಪ್ಪ ಪಾಣೇಗಾಂವ,
ಸುಭಾಷ ಪಾಟೀಲ, ಮಹೇಶ ಕಟ್ಟಿಮನಿ, ವಿವೇಕಾನಂದ, ಪಾಲಿಕೆ ಅಧಿಕಾರಿಗಳಾದ ರವಿ ಚವ್ಹಾಣ ಸೇರಿದಂತೆ ಅನೇಕರು ಸರ್ದಾರ ವಲ್ಲಭ ಭಾಯಿ ಪಟೇಲರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




















