
ಕಲಬುರಗಿ :ಎ.1: ಸರ್ಕಾರಿ ನೌಕರಿ ಪಡೆಯುವಾಗಿನ ಹುಮ್ಮಸ್ಸು ದೊರೆತ ನಂತರ ಮತ್ತು ಕೊನೆಯವರೆಗೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಅಗತ್ಯ. ದೊರೆತ ಹುದ್ದೆಗೆ ನ್ಯಾಯ ದೊರಕಿಸಿ ಕೊಡಬೇಕು. ಅಧಿಕಾರ ಸಮಾಜಮುಖಿಯಾಗಿ ಬಳಕೆಯಾಗಬೇಕು. ಪ್ರಾಮಾಣಿಕತೆ, ಬದ್ಧತೆ, ಕರ್ತವ್ಯನಿಷ್ಟೆಯಿಂದ ಕಾರ್ಯನಿರ್ವಹಸಿದರೆ ಆತ್ಮತೃಪ್ತಿ ದೊರೆಯುವುದರ ಜೊತೆಗೆ, ವ್ಯಕ್ತಿ ನಿವೃತ್ತಿಯ ನಂತರವು ಅವರ ಹೆಸರು ಶಾಶ್ವತವಾಗಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ರವೀಂದ್ರಕುಮಾರ ಸಿ.ಬಟಗೇರಿ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ದೊಡ್ಡಮನಿ ಅವರಿಗೆ ಸತ್ಕರಿಸಿ, ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೈಭೀಮ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಕಾಲೇಜಿನ ಉಪನ್ಯಾಸಕರಾದ ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ್, ಮಲ್ಲಪ್ಪ ರಂಜಣಗಿ, ದುಂಡಪ್ಪ ಯರಗೋಳ, ಕೀರ್ತಿ ಭುಜುರಕೆ, ಗ್ರಂಥಾಪಾಲಕ ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ ಸುರಪುರ, ದ್ವಿದಸ ರಾಮಚಂದ್ರ ಚವ್ಹಾಣ, ಕಲಬುರಗಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಮಲ್ಲಯ್ಯ ಮಠಪತಿ, ರೇಣುಕಾ ಚಿಕ್ಕಮೇಟಿ, ಪ್ರದಸ ನೇಸರ ಎಂ.ಬೀಳಗಿಮಠ, ಸೇವಕ ಭಾಗಣ್ಣ ಹರನೂರ, ಯಮನಪ್ಪ, ಮಹಾಂತೇಶ್ ಸೇರಿದಂತೆ ಇನ್ನಿತರರಿದ್ದರು.






















