
ಕೋಲಾರ,ಮಾ,೫- ಭಾರತ ಸರ್ಕಾರವು ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಗಾರ್ ಯೋಜನೆಯನ್ನು ಪ್ರಾರಂಭಿಸಿದೆ ಈ ಯೋಜನೆಯನ್ನು ಸದ್ಬಳಿಸಿ ಕೊಳ್ಳುವಲ್ಲಿ ಸಾರ್ವಜನಿಕರನ್ನು ಜಾಗೃತಿಗೊಳಿಸ ಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಜಿಲ್ಲಾ ಕಚೇರಿಯ ಆಯುಕ್ತರಾದ ಎಸ್.ರಾಮಕೃಷ್ಣನ್ ತಿಳಿಸಿದರು.
ನಗರದ ಬಿ.ಎಸ್.ಎನ್.ಎಲ್. ಕಚೇರಿಯ ಅವರಣದಲ್ಲಿನ ಕಚೇರಿಯಲ್ಲಿ ಅವರು ಮಾತನಾಡಿ ಭಾರತ ಸರ್ಕಾರದ ಈ ಯೋಜನೆಯ ಉದ್ದೇಶವು ಪ್ರಮುಖವಾಗಿ ಉದ್ಯೋಗ ಸೃಷ್ಠಿಯನ್ನು ಉತ್ತೇಜಿಸುವುದು ಮತ್ತು ಭಾರತದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದಾಗಿದೆ. ಈ ಪ್ರಮುಖ ಯೋಜನೆಯಡಿ ಮೊದಲ ಬಾರಿಗೆ ಉದ್ಯೋಗ ಪಡೆಯುವವರು ಹಾಗೂ ಉದ್ಯೋಗದಾತರಿಗೆ ಹಣಕಾಸಿನ ಪ್ರೋತ್ಸಾಹವನ್ನು ನೀಡಲಾಗುವುದು ಇದರಿಂದ ಅಧಿಕೃತ ಉದ್ಯೋಗ ವಲಯ ವಿಸ್ತರಿಸಿ ಉದ್ಯೋಗದಾತರು ಹೊಸ ಪ್ರತಿಭಾವಂತರಿಗೆ ಉದ್ಯೋಗಾವಕಾಶ ನೀಡಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು,
ಮೊದಲ ಬಾರಿಗೆ ಉದ್ಯೋಗ ಪಡೆಯುವಂತ ಆರ್ಹ ಉದ್ಯೋಗಿಗಳಿಗೆ (ಭಾಗ ಎ) ೨೦೨೫ರ ಆಗಸ್ಟ್ ೧ರ ಮೊದಲು ಇ.ಪಿ.ಎಫ್.ಓ , ಪಿ.ಎಫ್. ಖಾತೆಗೆ ಕೊಡುಗೆ ನೀಡದವವರು ಮತ್ತು ತಿಂಗಳಿಗೆ ೧ ಲಕ್ಷ ರೂ ವೇತನ ಪಡೆಯುವವರು ಒಂದು ತಿಂಗಳ ಮೂಲ ವೇತನದೊಂದಿಗೆ ಡಿ.ಎ. ಗೆ ಸಮನಾದ ಗರಿಷ್ಟ ರೂ ೧೫ ಸಾವಿರ ರೂ ವರೆಗೆ ಏಕ ಕಾಲಿಕ ಪ್ರೋತ್ಸಾಹ ಧನವನ್ನು ಪಡೆಯುತ್ತಾರೆ. ಈ ಪ್ರೋತ್ಸಹ ಧನವನ್ನು ಎರಡು ಹಂತಗಳಲ್ಲಿ ನೀಡಲಾಗುವುದು . ೬ ತಿಂಗಳ ನಿರಂತರ ಸೇವೆಯ ನಂತರ ಮೊದಲ ಕಂತು ಹಾಗೂ ೧೨ ತಿಂಗಳ ಸೇವೆಯ ನಂತರ ಮತ್ತು ಅರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಎರಡನೆ ಕಂತು ನೀಡಲಾಗುವುದು ಎಂದರು
ಉದ್ಯೋಗದಾತರಿಗೆ ( ಭಾಗ ಬಿ ) ತಮ್ಮ ಹೆಚ್ಚುವರಿ ಉದ್ಯೋಗಿಯನ್ನು ಕನಿಷ್ಟ ೬ ತಿಂಗಳ ಕಾಲ ಕಾಯ್ದು ಕೊಂಡರೆ, ೨,ವರ್ಷಗಳ ಕಾಲ (ಉತ್ಪಾದನಾ ಸಂಸ್ಥೆಗಳಲ್ಲಿ ೪ ವರ್ಷ) ಪ್ರತಿ ಹೆಚ್ಚುವರಿ ಉದ್ಯೋಗಿಗೆ ಮಾಸಿಕ ಪ್ರೋತ್ಸಾಹ ಧನ ಪಡೆಯುತ್ತಾರೆ. ತಿಂಗಳಿಗೆ ೧೦ ಸಾವಿರ ರೂ ವರೆಗೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾಸಿಕ ೧ ಸಾವಿರ ರೂ. ತಿಂಗಳಿಗೆ ೧೦ ಸಾವಿರದಿಂದ ೨೦ ಸಾವಿರದವರೆಗೆ ಸಂಬಳ ಪಡೆಯುವಂತ ಉದ್ಯೋಗಿಗಳಿಗೆ ಮಾಸಿಕ ರೂ ೨ ಸಾವಿರ ರೂ, ತಿಂಗಳಿಗೆ ೩೦ ಸಾವಿರ ರೂವರೆಗೆ (ಒಟ್ಟು ಆರ್ಹತೆಯ ಪ್ರಕಾರ ೧ ಲಕ್ಷ ರೂ ವರೆಗೆ) ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾಸಿಕ ೩ ಸಾವಿರ ರೂ, ೫೦ ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ ೨ ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸ ಬೇಕು. ೫೦ ಅಥವಾ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಟ ೫ ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸ ಬೇಕು ಎಂದು ಹೇಳಿದರು.
ಪಾವತಿ ವ್ಯವಸ್ಥೆಗಳು-
ಮೊದಲ ಬಾರಿಗೆ ಉದ್ಯೋಗ ಪಡೆದವರ ಪ್ರೋತ್ಸಾಹ ಧನ ನೇರವಾಗಿ ಅವರ ಅಧಾರ್-ಲಿಂಕ್ ಬ್ಯಾಂಕ್ ಖಾತೆ ಮೂಲಕ ಜಮೆ ಆಗಲಿದೆ. ಉದ್ಯೋಗದಾತರ ಪ್ರೋತ್ಸಾಹ ಧನ ನೇರವಾಗಿ ಪಾನ್ ಲಿಂಕ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.
ಈ ಪ್ರಯೋಜನಗಳನ್ನು ಪಡೆಯಲು ಉದ್ಯೋಗದಾತರು ಇಫ್ಕೋ ಎಂಪ್ಲಾಯರ್ ಪೋರ್ಟಲ್‌ನಲ್ಲಿ ಏಕ ಕಾಲಿಕ ಆನ್ ಲೈನ್ ನೋಂದಣಿ ಪೂರ್ಣಗೊಳಿಸ ಬೇಕು. ಅಧಿಕೃತ ಪಿ.ಎಂ.ವಿ.ಬಿ.ಆರ್.ವೈ. ಪೋರ್ಟಲ್ ( ಪಿ.ಎಂ.ವಿ.ಬಿ.ಆರ್.ವೈ. ಇಪಿಎಪ್ ಇಂಡಿಯು ಗೌರ್ವನ್‌ಮೆಂಟ್ ಇಂಡಿಯಾ)ಗೆ ಭೇಟಿ ನೀಡಿ ಎಂಪ್ಲಾಯರ್ ಆಗಿ ಲಾಗಿನ್ ಮಾಡಬೇಕೆಂದರು.
ಪಿ.ಎಂ.ವಿ.ಬಿ.ಆರ್.ವೈ- ಭಾಗ ಬಿ ನೋಂದಣಿಯನ್ನು ಆಯ್ಕೆ ಮಾಡಿ ,ಜಿ.ಎಸ್.ಟಿಮ, ಪಾನ್- ಲಿಂಕ್ ಬ್ಯಾಂಕ್ ಖಾತೆಗೆ ವಿವರಗಳನ್ನು ನಮೋದಿಸಿ ಮತ್ತು ಅಂಡರ್ ಟೇಕಿಂಗ್ ಪತ್ರ ಸಲ್ಲಿಸ ಬೇಕು. ಈ.ಸಿಗ್ನ ಅಥವಾ ಡಿಜಿಟಲ್ ಸಹಿ ಪ್ರಮಾಣ ಪತ್ರ (ಡಿ.ಎಸ್.ಸಿ) ಮೂಲಕ ಪರಿಶೀಲನೆ ಪೂರ್ಣಗೊಳಿಸ ಬೇಕು. ಯಶಸ್ವಿ ನೋಂದಣಿಯ ನಂತರ ಅಂಡರ್ ಟೇಂಕಿಂಗ್ ಪತ್ರದ ಪಿ.ಡಿ.ಎಫ್ ಅನ್ನು ಡೌನ್ ಲೋಡ್ ಮಾಡಿ ಮತ್ತು ದಾಖಲೆಗಾಗಿ ಸಂರಕ್ಷಿಸಲಾಗುವುದು ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಜಿ.ಎಸ್.ಟಿ. ಇಲ್ಲದ ಉದ್ಯೋಗದಾತರು ಡ್ರಾಪ್ ಡೌನ್‌ನಿಂದ ಮಾನ್ಯ ಕಾರಣಗಳನ್ನು ಆಯ್ಕೆ ಮಾಡ ಬಹುದಾಗಿದೆ ಇದರ ಜೂತೆಗೆ ಬ್ಯಾಂಕ್ ವಿವರಗಳನ್ನು ನಂತರ ನವೀಕರಿಸ ಬಹುದು ಎಂದು ಸ್ವಷ್ಟಪಡಿಸಿದರು.
ಎಲ್ಲಾ ಆರ್ಹ ಉದ್ಯೋಗದಾತರು ತಕ್ಕಣವೇ ಮೇಲೆ ತಿಳಿಸಿದ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ವಿಕಸಿತ ಭಾರತಕ್ಕೆ ಸ್ಥಿರ ಉದ್ಯೋಗವನ್ನು ನಿರ್ಮಿಸಲು ಸಹಕರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ನೋಂದಣಿ ಅಧಿಕಾರಿ ಆರ್.ಮಹೇಶ್ ಬಾಬು ಇದ್ದರು.























