ಕಲ್ಬುರ್ಗಿ, ಅ. 14: ಮಾಹಿತಿ ಹಕ್ಕು ಕಾಯ್ದೆಯ ಆಶಯದಂತೆ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಗ ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ ಸಿಂಗ್ ಅವರು ಹೇಳಿದರು.
ಸೋಮವಾರ ಸಂಜೆ ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದಲ್ಲಿ ಆಯೋಜಿಸಿದ ಮಾಹಿತಿ ಹಕ್ಕು ಕಾಯ್ದೆ ದಿನಾಚರಣೆಯಲ್ಲಿ ಮಾತನಾಡಿದ ಅವರು ಮಾಹಿತಿ ಹಕ್ಕು ಕಾಯ್ದೆ ಆಡಳಿತದಲ್ಲಿ ಜನ ಸಾಮಾನ್ಯರಿಗೆ ಸಹಭಾಗಿತ್ವ ನೀಡುವ ಕಾಯ್ದೆಯಾಗಿದೆ, ಆಡಳಿತದಲ್ಲಿ ಪಾರದಶರ್ಕತೆ, ಭ್ರಷ್ಟಚಾರ ನಿಯಂತ್ರಣ ಕಾಯ್ದುಕೊಳ್ಳುವುದರ ಮೇಲೆ ನಾಗರಿಕ ನಿಗಾ ಇಡಲು ಪೂರಕವಾಗಿದೆ ಎಂದು ಹೇಳಿದರು.
ಅಕ್ಟೋಬರ್-12, 2005 ರಲ್ಲಿ ಈ ಕಾಯ್ದೆ ದೇಶದಲ್ಲಿ ಜಾರಿಗೆ ಬಂದ ಬಳಿಕ ಆಡಳಿತದಲ್ಲಿ ಸುಧಾರಣೆ ತಂದು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವಲ್ಲಿ ಕಾಯ್ದೆ ಕೆಲಸ ಮಾಡಿದೆ, ಆದರೂ ಸರ್ಕಾರಿ ಅಧಿಕಾರಿಗಳು ಇನ್ನೂ ಪರಿಣಾಮಾಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಬೇಕಾಗಿದೆ. ಎಂದು ಸೂಚನೆ ನೀಡಿದರು.
ಕಲ್ಬುರ್ಗಿ ಪೀಠದಲ್ಲಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಮಾಹಿತಿ ಹಕ್ಕು ಕಾಯ್ದೆಯ ಆಶಯದ ಪೂರಕವಾಗಿ ಆಯೋಗದ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ನಿರ್ವಹಿಸುತ್ತಿದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ಕಾಯ್ದೆ ಲಾಭಪಡೆಯಲು ಅನುಕೂಲವಾಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ಮಾಡಿದರು.
ಆರಂಭದಲ್ಲಿ ಪೀಠದ ಕಾನೂನು ಸಹಾಯಕಿ ಪೂಜಾ ಆರ್. ಪ್ರಸ್ತಾವಿಕ ಮಾತನಾಡಿದರು. ಕೊನೆಯಲ್ಲಿ ಶಾಖಾಧಿಕಾರಿ ಶಿವಕುಮಾರ ವಂದಿಸಿದರು ಈ ವೇಳೆ ಪೀಠದ ಸಿಬ್ಬಂದಿ ಹಾಜರಿದ್ದರು.



















