ಇಂಡಿ :ಅ.2: ನಗರದ ಕೇಂದ್ರ ಬಸ್ ನಿಲ್ದಾಣ ಅವರದಲ್ಲಿ ವಿಜಯಪುರ ಪಾಯಿಂಟಿಗೆ ಐದು ಅಂಗಡಿಗಳು ವ್ಯಾಪಾರ ಮಾಡುತ್ತ ಯಾವುದೇ ತೊಂದರೆ ಇಲ್ಲದೆ ಸುಮಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಆದರೆ ಈಗ ವ್ಯಾಪಾರ ಇಲ್ಲದೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.ಹಲವಾರು ವರ್ಷಗಳಿಂದ ಸುಗಮವಾಗಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ ಆದರೆ ಈಗ ಮಾತ್ರ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಯಾಕೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಅಂಶ ವಿದೆ. ಕೆಲವು ದಿನಗಳ ಹಿಂದೆ ಈ ನಾಡಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ 4000ಕೋಟಿಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲು ಇಂಡಿ ನಗರಕ್ಕೆ ಆಗಮಿಸದರು. ಈ ಹಿನ್ನಲೆಯಲ್ಲಿ ಪೆÇಲೀಸ್ ಇಲಾಖೆಯು ಟ್ರಾಫಿಕ್ ನಿಯಂತ್ರಿಸಲು ವಿಜಯಪುರ ಪಾಯಿಂಟ್ ದಿಂದ ಹೊರಗೆ ಹೋಗುವ ದಾರಿ ತಾತ್ಕಾಲಿಕ ಬಂದ್ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿ ಬೇರೆ ಕಡೆಯಿಂದ ಬಸಗಳು ಹೊರಗೆ ಹೋಗಲು ದಾರಿ ಮಾಡಿ ಕೊಳ್ಳಲಾಯಿತು.ಕೆಲವು ದಿನಗಳಲ್ಲಿ ಮತ್ತೆ ಮೊದಲಿನ ರಸ್ತೆ ಯಿಂದ ಬಸ್ ಗಳು ಅನುವು ಮಾಡಿಕೊಡುತ್ತೇವೆ ಎಂದು ಹೇಳಿ ಅದು ಯಾವದೂ ಮಾಡೇ ಇಲ್ಲ. ಅದೇ ದಾರಿ ಮುಂದು ವರಿಸಿಕೊಂಡು ಹೋಗುತ್ತಿರುವುದರಿಂದ ವ್ಯಾಪಾರವು ಕುಸಿಯುತ್ತಿದೆ.ಎಲ್ಲ ಪ್ರಯಾಣಿಕರು ಎ ಟಿ ಎಂ ನಿಂದ ಆಚೆ ನಿಲ್ಲುವಂತಾಗಿದ್ದರಿಂದ ವ್ಯಾಪಾರದಲ್ಲಿ ತುಂಬಾನೆ ಹೊಡತ್ತು ಬಿದ್ದಿದೆ ಅಂಗಡಿಗಳ ಬಾಡಿಗೆ ಕಟ್ಟಲು ಸಾಧ್ಯ ವಾಗುತ್ತಿಲ್ಲ ಎಂಬ ವ್ಯಾಪಾರಸ್ಥರು ತಮ್ಮ ಅಳಿಲು ತೋಡಿಕೊಂಡಿದ್ದಾರೆ. ಇದೆ ವ್ಯಾಪಾರವು ನಮ್ಮ ಕುಟುಂಬಕ್ಕೆ ಆಶ್ರೇಯ ವಾಗಿದೆ ಹೀಗೆ ಮುಂದುವರಿದರೆ ನಮ್ಮ ಕುಟುಂಬಗಳು ಬೀದಿಗೆ ಬರುವಂತೆ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಟೆಂಡರಿನಲ್ಲಿ ಕೂಡ ಬಸ್ ನಿಲ್ದಾಣದಿಂದ ಹೊರಗೆ ಹೋಗುವ ದ್ವಾರದಲ್ಲಿ ಮಳಿಗೆಗಳಿಗೆ ಟೆಂಡರ್ ಕರೆಯಲಾಗಿದೆ ಎಂಬ ಅಂಶವು ಅದರಲ್ಲಿದೆ. ಹಾಗಾಗಿ ಮೊದಲಿನಂತೆ ಬಸ್ ಗಳು ಹೊರಹೋಗಲು ದಾರಿ ಕಲ್ಪಿಸಬೇಕು ಎಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಾನು ಸ್ವಂತ ಯಾವುದೇ ನಿರ್ಧಾರ ತಗೆದುಕೊಳ್ಳಲಾಗದು ತಾಲೂಕ ಆಡಳಿತ ಯಾವ ರೀತಿ ನಿರ್ಧರಿಸುತ್ತಾರೆ ಅದನ್ನು ನಾನು ಪಾಲಿಸಬೇಕಾಗುತ್ತದೆ. ಮೊದಲಿನ ಸ್ಥಳದಲ್ಲಿ ಬಸ್ ಗಳು ಹೊರಗೆ ಹೋಗಲು ರಸ್ತೆ ಪ್ರಾರಂಭಿಸಲು ನನಗೆ ಮೇಲಾಧಿಕಾರಿಗಳಿಂದ ಮಾಹಿತಿ ಇಲ್ಲ
ಖೈನೂರ ಘಟಕ ವ್ಯವಸ್ಥಾಪಕರು ಇಂಡಿ























