ಕಲಬುರಗಿ: ನಗರದ ಪಬ್ಲಿಕಕ್ ಗಾರ್ಡನ್ ನಲ್ಲಿ ನಾಳೆ ೨೬ನೇ ಅಕ್ಟೋಬರ್ ೨೬ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಕಲಬುರಗಿ ಅಭಿವೃದ್ಧಿ ಪರ ಸಮಿತಿ”ಯ ವತಿಯಿಂದ ಹುತಾತ್ಮ ಅಶ್ಫಾಕುಲ್ಲಾ ಖಾನ್ ಅವರ ೧೨೬ನೇ ಜನ್ಮದಿನ ಹಾಗೂ ಅವರ ರಾಷ್ಟಾçಭಿಮಾನ ಸೇವೆ, ತ್ಯಾಗ ಬಲಿದಾನದ ಕುರಿತು ಸ್ಮರಿಸಲಾಗುವುದು.
ಹುತಾತ್ಮ ಅಶ್ಫಾಕುಲ್ಲಾ ಖಾನ್ ಅವರನ್ನು ಸ್ಮರಿಸಲು ಅವರ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಸಮಿತಿಯ ಸದಸ್ಯರು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಲೂಯಿಸ್ ಕೋರಿ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರಿಗೆ ಶುಭ ಕೋರಿ ಹಾರೈಸಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಬಿರಾದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















