`ರಂಗಾಯಣ’ ದಲ್ಲಿ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅಂತಿಮ ದರ್ಶನ

ಧಾರವಾಡ,ಅ14: ಹಾಸ್ಯ ಕಲಾವಿದ, ಸಿನಿಮಾ ನಟ, ವೃತ್ತಿ ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ಸೋಮವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ತಾಳಿಕೋಟಿ ಅವರ ಪಾರ್ಥೀವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಮೂಲಕ ಧಾರವಾಡದ ರಂಗಾಯಣಕ್ಕೆ ತರಲಾಯಿತು. ಬೆಳಿಗ್ಗೆ ರಂಗಾಯಣದ ಆವರಣದಲ್ಲಿ ಒಂದು ಗಂಟೆಗಳ ಕಾಲ ತಾಳಿಕೋಟಿ ಅವರ ಅಂತಿಮ ದರ್ಶನಕ್ಕೆ ಧಾರವಾಡ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.

ತಾಳಿಕೋಟಿ ಅವರ ಅಂತಿಮ ದರ್ಶನಕ್ಕೆ ನೂರಾರು ರಂಗಭೂಮಿ ಕಲಾವಿದರು ಹಾಗೂ ಅವರ ಅಭಿಮಾನಿಗಳು ಧಾರವಾಡ ರಂಗಾಯಣಕ್ಕೆ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯ್ತಿ ಸಿಇಓ ಭುವನೇಶ ಪಾಟೀಲ, ಮೇಯರ್ ಜ್ಯೋತಿ ಪಾಟೀಲ ಇನ್ನಿತರರು ಅಂತಿಮ ದರ್ಶನ ಪಡೆದರು.