ಕಾರ್, ದ್ವಿಚಕ್ರ ವಾಹನದ ಮಧ್ಯೆ ಡಿಕ್ಕಿ : ಸಾವು

ಭಾಲ್ಕಿ :ನ.24: ಪಟ್ಟಣದ ಹೊರವಲಯದ ದಾದರ್ ಸಮೀಪ ರಾತ್ರಿ ಈರ್ಟಿಕಾ ಕಾರ್, ದ್ವಿಚಕ್ರ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಉದಗೀರ್ ಕಡೆಗೆ ಚಲಿಸುತ್ತಿದ್ದ ಈರ್ಟಿಕಾ ಕಾರ್ ಮತ್ತು ಭಾಲ್ಕಿ ಪಟ್ಟಣದ ಕಡೆಗೆ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ತಾಲ್ಲೂಕಿನ ಕೊಟಗ್ಯಾಳ ವಾಡಿಯ ಲವಕುಮಾರ ವೆಂಕಟರಾವ್ ಬಿರಾದರ (30) ಮೃತಪಟ್ಟಿದ್ದಾನೆ, ಹಿಂಬದಿ ಸವಾರ ಅರ್ಜುನ ಧೋಂಡಿಬಾ (28) ಗಾಯಗೊಂಡಿದ್ದು ಬೀದರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೊಂದು ಬೈಕ್ ಮೇಲಿದ್ದ ತಾಲ್ಲೂಕಿನ ಆನಂದವಾಡಿ ನಿವಾಸಿ ಬಾಲಾಜಿ ಸಂಜೀವಕುಮಾರ (25) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.