
ಕಲಬುರಗಿ,ಜ.27-ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಬೈಕ್ ಸವಾರ ಗಾಯಗೊಂಡಿರುವ ಘಟನೆ ಪಟ್ಟಣ ಟೋಲ್ ನಾಕಾ ಸಮೀಪ ನಡೆದಿದೆ.
ಮೃತನನ್ನು ಬಸವರಾಜ ಅಲಿಯಾಸ್ ಬಸಯ್ಯ ತಂದೆ ಮಲ್ಲಯ್ಯ ಮಠಪತಿ ಎಂದು ಗುರುತಿಸಲಾಗಿದ್ದು, ಸದ್ದಾಂ ತಂದೆ ಇಸ್ಮಾಯಿಲ್ ಎಂಬಾತ ಗಾಯಗೊಂಡಿದ್ದಾನೆ.
ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.























