Home ಜಿಲ್ಲೆ ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ

ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ

ವಿಜಯಪುರ :ಮೇ.28: ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ವರುಣದೇವನ ಆಗಮನಕ್ಕಾಗಿ ಧರ್ಮದರ್ಶಿಯಾದ ಪೂಜ್ಯ ಶ್ರೀ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಜಗದೊಡೆಯನಾದ ಶ್ರೀಗಿರಿಯ ಶ್ರೀ ಮಲ್ಲಿಕಾರ್ಜುನನಿಗೆ ಸಹಸ್ರನಾಮಾವಳಿಯ ಮಹಾಶಿವಪೂಜೆ ಜರುಗಿತು. ವಿಶ್ವದಲ್ಲಿ ಉತ್ತಮವಾದ ಮಳೆಯಾಗಿ ಬೆಳೆಬಂದು ಸರ್ವರೂ ಶಾಂತಿಯುತವಾದ ಜೀವನವನ್ನು ಸಾಗಿಸಬೇಕು. ಹಾಗೂ ಸಕಲ ಜೀವರಾಶಿಗಳಿಗೆ ಒಳಿತಾಗಬೇಕೆಂದು ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಸಯ್ಯ ಹಿರೇಮಠ, ಈರಯ್ಯ ಮಠಪತಿ, ಹಣಮಂತ ಪುಟ್ಟಿ, ದೇವಕ್ಕಿ ದಳವಾಯಿ, ನೀಲಮ್ಮಾ ಪತ್ತಾರ, ಅಯ್ಯವ್ವಾ ಆಹೇರಿ, ಸಂಗವ್ವಾ ನುಚ್ಚಿ, ವಿಷ್ಣು ಒಂಬಾಸೆ, ಸಾಯಬಣ್ಣ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.