ಶೀತಗಾಳಿ: ಆಸ್ಪತ್ರೆಗಳು ಭರ್ತಿ

ಲಕ್ಷ್ಮೇಶ್ವರ,ಜ13: ಕಳೆದ ಮೇ ತಿಂಗಳಿನಿಂದ ಆರಂಭಗೊಂಡ ಮಳೆ ಮತ್ತು ಕಳೆದ ಎರಡು ತಿಂಗಳಿನಿಂದ ಬಿಟ್ಟುಬಿಡದೆ ಬೀಸುತ್ತಿರುವ ಶೀತ ಗಾಳಿಯಿಂದಾಗಿ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿ ಜನರು ರೋಗ ರುಜಿನಗಳಿಂದ ಬಳಲುತ್ತಿದ್ದು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಹೆಚ್ಚು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರಲ್ಲಿ ಪ್ರತಿಶತ 70ಕ್ಕೂ ಹೆಚ್ಚು ಕೆಮ್ಮು ನೆಗಡಿ ಜ್ವರ ಮೈ ಕೈ ನೋವು ಕಣ್ಣು ಉರಿ , ಶೀತ ಮೈತುರಿಕೆ ಉಂಟಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ.


ಜನವರಿ 2 ನೇ ವಾರ ಸಮೀಪಿಸುತ್ತಿದ್ದರು ಚಳಿಯ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ ಈಗ ಎರಡು ಮೂರು ದಿನಗಳಿಂದ ಹವಾಮಾನ ಮತ್ತಷ್ಟು ವೈಪರಿತ್ಯವಾಗಿದ್ದು ಪರಿಣಾಮವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನಾರೋಗ್ಯಕ್ಕೆ ಕಾರಣವಾಗಿದೆ.

ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀಕಾಂತ್ ಖಾಟೆ ವಾಲೆ ಅವರು ಸತತ ಮಳೆ ಮತ್ತು ಬೀಸುತ್ತಿರುವ ಚಳಿಗಾಳಿಯಿಂದಾಗಿ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿ ಕೆಮ್ಮು ಜ್ವರ ನೆಗಡಿ ಸೇರಿದಂತೆ ಅನೇಕ ರೀತಿಯ ಭಾದೆಗಳು ಕಾಣಿಸಿಕೊಳ್ಳುತ್ತಿವೆ ಇದಕ್ಕೆ ಜನಸಾಮಾನ್ಯರು ಮುಂಜಾಗ್ರತಾ ಕ್ರಮವಾಗಿ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು ಮತ್ತು ಕಷಾಯ ಕಾಫಿ ಮುಂತಾದವುಗಳನ್ನು ತೆಗೆದುಕೊಳ್ಳಬೇಕು ಸಾಧ್ಯವಾದ ಮಟ್ಟಿಗೆ ತಲೆ ಮತ್ತು ಕಿವಿಗೆ ಹೆಚ್ಚು ತಂಪು ಬಾರದಂತೆ ನೋಡಿಕೊಳ್ಳಬೇಕು ಬೀಸುತ್ತಿರುವ ಶೀತ ಗಾಳಿಯಿಂದ ದೇಹದ ಮೇಲೆ ಪರಿಣಾಮ ಬೀರುತ್ತಿದ್ದು ಇದು ಮೈ ತುರಿಕೆಗೆ ಕಾರಣವಾಗಿದೆ. ಜನಸಾಮಾನ್ಯರು ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಹೇಳಿದ್ದಾರೆ.