ಸ್ಕೂಲ್ ಚಂದನಕ್ಕೆ ಡಿ.೧೩ ರಂದು ಸಿಎಂ ಸಿದ್ದರಾಮಯ್ಯ


ಲಕ್ಷೆ÷್ಮÃಶ್ವರ. ಡಿ.೧೧:ಪಟ್ಟಣದ ಪ್ರತಿಷ್ಠಿತ ಶಾಲೆ ಸಿಬಿಎಸ್‌ಇ ಸ್ಕೂಲ್ ಚಂದನಕ್ಕೆ ಡಿ.೧೩ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ ೧೧ ಗಂಟೆಗೆ ಹೆಲೆಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ ಎಂದು ರೋಣ ತಾಲೂಕಿನ ಶಾಸಕಗದಗಜಿಲ್ಲಾಕಾಂಗೇಸ್ಸ ಅಧ್ಯಕ್ಷ ಜಿ.ಎಸ್.ಪಾಟೀಲ್ ಹೇಳಿದರು.


ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಸಭಾ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಭಾರತ ರತ್ನ ಪ್ರೋ ಸಿಎನ್ ಆರ್ ರಾವರವರ ೧೦ ನೇ ವರ್ಷದ ವಿಜ್ಞಾನ ವಿಸ್ತöÈತ ಕಾರ್ಯಕ್ರಮ ಉದ್ಟಾಟನೆ ಮತ್ತು ೨೦೨೫ ನೇ ಸಾಲಿನ ಚಂದನಶ್ರೀ ಪ್ರಶಸ್ತಿಯನ್ನು ಬಿ.ಎಸ್ ಪಾಟೀಲ್ ನಿವೃತ್ತ ಐಎಎಸ್ ಅಧಿಕಾರಿ ಹಿಂದಿನ ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರಕಾರ ಹಾಗೂ ಗ್ರೇಟರ್ ಬೆಂಗಳೂರು ರೂವಾರಿ ಇವರಿಗೆ ನೀಡಲಾಗುತ್ತಿದೆ ಹಾಗೂ ಸ್ಕೂಲ್ ಚಂದನ ಗೌರವ ನಿರ್ದೇಶಕರಾಗಿ ನಿವೃತ್ತಿರಾದ ೨೨ ವರ್ಷ ಒಂದು ದಿನ ರಜೆ ಮಾಡದೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿ.ಹೆಚ್.ಸಿ.ರಟಗೇರಿಯವರ ಕಂಚಿನ ಮೂರ್ತಿ ಅನಾವರಣವನ್ನು ಸಿಎಂ ಸಿದ್ದರಾಮಯ್ಯನವರು ಮಾಡುವವರು ಎಂದು ತಿಳಿಸಿದರು.


ನಂತರ ಸ್ಕೂಲ್ ಚಂದನದ ಸಂಸ್ಥಾಪ ಟಿ.ಈಶ್ವರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಡಿಸೆಂಬರ್ ೧೩.೧೪.೧೫ ರಂದು ಮೂರು ದಿನಗಳ ಭಾರತ ರತ್ನ ಪ್ರೋ ಸಿ.ಎನ್.ಆರ್ ರಾವರವರ ವಿಜ್ಞಾನ ವಿಸ್ತöÈತ ಕಾರ್ಯಕ್ರಮ ರಾಷ್ಟç ಅಂತರಾಷ್ಟಿçÃಯ ಪ್ರಖ್ಯಾತ ವಿಜ್ಞಾನಿಗಳು ಕಾನೂನು ಸಂಸದಿಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಸಂಸದರುಹಾಗು ಕೇಂದ್ರ ಮಾಜಿ ಸಚಿವರಾದ ಜೈರಾಮ ರಮೇಶ ಬರಲಿದ್ದಾರೆ ವಿಸ್ತöÈತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆಎನಸಿಎಎಸ್ ಆರ್ ಐಎಸಸಿ ಐಐಟಿ ಐಐಎಸ್ ಜೆಎಂಪಿ ಬೆಂಗಳೂರು ಧಾರವಾಡ ಸೇರಿದಂತೆ ವಿಜ್ಞಾನಿಗಳು ವಿಜ್ಞಾನ ವಿಸ್ತöÈತ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ವಿಜ್ಞಾನಿಗಳಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು
ಕಾರ್ಯಕ್ರಮಕ್ಕೆ ಸಮಾರು ೧೫ ರಿಂದ ೨೦ ಸಾವಿರ ಜನ ಸೇರುವ ನಿರೀಕ್ಷೆಇದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್ ಪಾಟೀಲ್ ಬಿ ಆರ್ ಯಾವಗಲ್ಲ ಜಿ.ಎಸ್.ಗಡ್ಡದೇವರಮಠ ರಾಮಕೃಷ್ಣ ದೊಡ್ಡಮನಿ ರಾಮಣ್ಣ ಲಮಾಣಿ ಹುಮಾಯೂನ್ ಮಾಗಡಿ ಆನಂದ ಸ್ವಾಮಿ ಗಡ್ಡದೇವರಮಠ ಜಿ.ಆರ್.ಕೊಪ್ಪದಜಿ.ವಿ.ಪಾಟೀಲ್ ನಾಗರಾಜ ಮಡಿವಾಳರ ಚನ್ನಪ್ಪ ಜಗಲಿ ಸೋಮಣ್ಣ ಬೆಟಗೇರಿ ವೀರೇಂದ್ರಗೌಡ ಪಾಟೀಲ್ ದಾದಾಪೀರ ಮುಚಾಲೆ ಐಎಸ್ ಪಾಟೀಲ್ ವೀರಯ್ಯ ಮಠಪತಿ ಅಶೋಟಿ ಮಕಾಂದಾರ ಭಾಗ್ಯಶ್ರೀ ಬಾಬಣ್ಣ ಕಿರಣ ನವಲೆ ಅಂಬರೀಶತೆAಬದಮನಿ ಈರಣ್ಣ ಅಂಗಡಿ ಸೇರಿದಂತೆ ಮುಂಡರಗಿ ಗದಗ ರೋಣ ನರಗುಂದ ಗಜೇಂದ್ರಗಡ ತಾಲೂಕುಗಳ ಬ್ಲಾಕ್ಮಟ್ಟದ ಅಧ್ಯಕ್ಷರು ಉಪಸ್ಥಿತರಿದ್ದರು.