ಜಮಖಂಡಿ: ಅ.22:ನಾಗಮೋಹನದಾಸ ವರದಿ ಜಾರಿ ಮಾಡುವ ಮೂಲಕ ಒಳಮಿಸಲಾತಿಯನ್ನು ಹಂಚಿಕೆ ಮಾಡಿ ಹೇಳಿದಂತೆ ನಡೆದುಕೊಂಡಿದ್ದೆವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಸುದ್ದಿಗಾರರ ಜೋತೆ ದೂರವಾಣಿಯಲ್ಲಿ ಮಾತನಾಡಿ ಹುಬ್ಬಳ್ಳಿಯಲ್ಲಿ ಆಯೋಗದ ವರದಿ ಜಾರಿಗೆ ಸುಮಾರು ಐದಾರು ಲಕ್ಷದಷ್ಟು ಜನರು ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಹೇಳಿದಂತೆ ನಡೆದುಕೊಳ್ಳುವ ನಾಯಕರಾಗಿದ್ದಾರೆ, ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದಿದ್ದು, 6+6+5 ಹಂಚಿಕೆ ಮಾಡಿ ಜಾರಿ ಮಾಡುವ ಮೂಲಕ ಸಮಾಜಕ್ಕೆ ಹೆಚ್ಚಿನ ಶಕ್ತಿ ನೀಡಿದ್ದಾರೆ,
ವರದಿ ಜಾರಿಯಿಂದ ರಾಜ್ಯದ ಸಮುದಾಯದಲ್ಲಿ ಹೆಚ್ಚಿನ ಉತ್ಸಾಹ ಹೆಚ್ಚಿದೆ ಎಂದರು.
ಸತತ ಮೂರು ದಶಕಗಳಿಂದ ಬೇಡಿಕೆ ಇದ್ದ ನಮ್ಮ ಬೇಡಿಕೆಯನ್ನು ಇಡೇರಿಸಿದ ನಾಯಕ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಂಪುಟ ಸಹೋದ್ಯೋಗಿಗಳು ಸಮಾಜಕ್ಕೆ ಶಕ್ತಿ ನೀಡಿದ್ದಾರೆ ಎಂದರು.























