ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದ ಸಿಎಂ ಸಿದ್ದರಾಮಯ್ಯ ಅಥಣಿಯಲ್ಲಿ ಸಂಭ್ರಮ: ಗಜಾನನ ಮಂಗಸೂಳಿ

ಅಥಣಿ:ಜ.8: ಕರ್ನಾಟಕ ರಾಜ್ಯ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ಸುದೀರ್ಘ ಅವಧಿಯ ಆಡಳಿತದ ದಾಖಲೆಯನ್ನು ಸರಿಗಟ್ಟುವ ಮೂಲಕ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಮಹತ್ವದ ಸಾಧನೆಗೆ ಅಥಣಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಅವರು ಮುಖ್ಯಮಂತ್ರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.
ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ದೇವರಾಜು ಅರಸು ನಂತರ ಅತಿ ಹೆಚ್ಚು ದೀರ್ಘಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಸಿದ್ದರಾಮಯ್ಯನವರಿಗೆ ಅಭಿನಂದಿಸಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು ಅಹಿಂದ ವರ್ಗದ ನಾಯಕರಾಗಿ
ದಲಿತ, ಹಿಂದುಳಿದ ವರ್ಗಗಳು, ರೈತರು ಹಾಗೂ ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮಿದ ಸಿದ್ದರಾಮಯ್ಯ ಅವರು ರೆಕಾರ್ಡ್ ಅವಧಿಯ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಸಿ ಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದು ಈ ಬಾರಿ ಪಂಚ ಗ್ಯಾರಂಟಿ ಯೋಜನೆಗಳಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ನೇರವಾಗಿ ಸ್ಪಂದನೆ ನೀಡಿದ್ದಾರೆ. ಜನಸಾಮಾನ್ಯರಿಗೆ ಆರ್ಥಿಕ ಶಕ್ತಿ ತುಂಬಿದ್ದಾರೆ. ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅಭಿವೃದ್ಧಿಯೇ ಅವರ ಆಡಳಿತದ ಮುಖ್ಯ ಲಕ್ಷಣಗಳಾಗಿವೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನವು ಹೋರಾಟ, ಸಹನಶೀಲತೆ ಮತ್ತು ಜನಸೇವೆ ಎಂಬ ಮೌಲ್ಯಗಳ ಪ್ರತಿಬಿಂಬವಾಗಿದೆ. ದಾಖಲೆ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಅವರ ಸಾಧನೆ ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ಪ್ರೇರಣೆಯಾಗಲಿದೆ. ಬಡವರ ಬದುಕಿಗೆ ಆಸರೆಯಾಗಿರುವ ಸಿದ್ದರಾಮಯ್ಯನವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರೆಯಲಿ, ರಾಜ್ಯದ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಉಪ ಚುನಾವಣೆ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹಾರೈಸಿದರು.
ಕೇಂದ್ರ ಸರ್ಕಾರದಿಂದ ಇಡೀ ದೇಶದಲ್ಲಿ 57 ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿಯೇ ಅಥಣಿ ತಾಲೂಕಿಗೆ ಒಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ಅತ್ಯಂತ ಸಂತಸ ಸಂಗತಿ. ಕೇಂದ್ರೀಯ ವಿದ್ಯಾಲಯದ ಸ್ಥಾಪನೆಗೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಪರಿಶ್ರಮ ಹೆಚ್ಚಾಗಿದೆ. ಯಾರೇ ಮಾಡಿದರೂ ಇಬ್ಬರೂ ನಮ್ಮವರೇ ನಮ್ಮ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಗಜಾನನ ಮಂಗಸೂಳಿ ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಮುಖಂಡರಾದ ಬಸವರಾಜ ಬುಟಾಳೆ, ಅನೀಲ ಸುಣದೊಳಿ. ನ್ಯಾಯವಾದಿ ಸುನೀಲ ಸಂಕ, ಸುರೇಶಗೌಡ ಪಾಟೀಲ, ಪುರಸಭೆ ಸದಸ್ಯರಾದ ರಾವಸಾಬ ಐಹೂಳೆ. ಸೈಯದ್ ಅಮಿನ್ ಗದ್ಯಾಳ, ಪ್ರಮೋದ ಬಿಳ್ಳೂರ, ಉದಯ ಸೋಳಸಿ. ಸೈಯದ್ ಗಡ್ಡೇಕರ. ಸಂಜು ಕಾಂಬಳೆ, ನೇಮಿನಾಥ ನಂದೇಶ್ವರ, ಅಪ್ಪು ಜಮಾದಾರ. ಗುಲಾಬ ನಾಲಬಂದ. ತೌಸೀಫ್ ಸಾಂಗಲೀಕರ, ಶಿವಾನಂದ ಸೌದಾಗರ, ಉಮರ ಸೈಯದ್. ಗುಂಡು ಇಜಾರೆ. ವಿಜಯ ಕಾಂಬಳೆ. ಇಮ್ರಾನ್ ಪಟಾಯಿತ. ಅಕೀಬ್ ಗದ್ಯಾಳ. ಅಪ್ಪು ಘಟಕಾಂಬಳೆ. ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

#

ಅರಸು ಅವರ ದಾಖಲೆಯನ್ನು ಮುರಿಯುವುದು ಎಂದರೆ ಕೇವಲ ಅಧಿಕಾರದಲ್ಲಿರುವುದಲ್ಲ, ಜನಪರ ಆಡಳಿತವನ್ನು ನೀಡುವುದು ಎಂದರ್ಥ. ಸಿದ್ದರಾಮಯ್ಯನವರು ತಮ್ಮ ಅಭಿವೃದ್ಧಿ ಪರ ಯೋಜನೆಗಳ ಮೂಲಕ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು. ಅರಸು ಅವರ ಹಾದಿಯಲ್ಲೇ ನಡೆದು, ಶೋಷಿತ ವರ್ಗಗಳ ಧ್ವನಿಯಾಗಿ ನಿಂತಿರುವುದು ಹೆಮ್ಮೆಯ ವಿಷಯ ಈ ಐತಿಹಾಸಿಕ ಸಾಧನೆಯು ಅವರ ದಕ್ಷ ನಾಯಕತ್ವಕ್ಕೆ ಮತ್ತು ಜನರ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ.

       ಗಜಾನನ ಮಂಗಸೂಳಿ. 
      ಕಾಂಗ್ರೆಸ್ ಮುಖಂಡರು