
ಸುರಪುರ:ಫೆ.೧೨: ನಗರದ ರಂಗAಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಸುರಪುರ ಕ್ಲಸ್ಟರ್ ಮಟ್ಟದ ಎಫ್ ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತನಾಡಿ,ಎಫ್ ಎಲ್ ಏನ್ ಕಲಿಕಾ ಹಬ್ಬ ಕಾರ್ಯಕ್ರಮವು ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಗೆ ಪ್ರೋತ್ಸಾಹ ನೀಡುತ್ತದೆ.ಕನ್ನಡ ಗಣಿತ ವಿಷಯದ ಸಾಮರ್ಥ್ಯಗಳನ್ನು ಒಳಗೊಂಡಿದ್ದು ಕನ್ನಡದಲ್ಲಿ ಗಟ್ಟಿ ಓದು, ಚಿತ್ರ ನೋಡಿ ವಿವರಿಸುವುದು, ಕಥೆ ಹೇಳುವಿಕೆ, ಕೈಬರಹ, ಪಾತ್ರಾಭಿನಯ, ಅಭಿನಯ ಕೌಶಲ್ಯ ಛದ್ಮವೇಷ ವಿಷಯಗಳ ಕುರಿತು ಮಕ್ಕಳಿಗೆ ಈ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತದೆ ಎಂದರು. ಅಲ್ಲದೆ ಮಕ್ಕಳಿಗೆ ರಸಪ್ರಶ್ನೆ,ಪೋಷಕರು ಮತ್ತು ಮಕ್ಕಳ ಸಹ ಸಂಬAಧ,ಆರೋಗ್ಯ ಮತ್ತು ಪೌಷ್ಟಿಕಾಂಶ ವಿಷಯಗಳ ಕುರಿತು ತಿಳಿಸಿಕೊಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೧೫ ಶಾಲೆಯ ಮಕ್ಕಳು ವಿವಿಧ ಚಟುವಟಿಕೆಗಳ ಕುರಿತು ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ನಾಸಿರ್ ಹುಸೇನ್ ಕುಂಡಾಲೆ, ಸದಸ್ಯರಾದ ರಮೇಶ ಡೊಳ್ಳೆ, ಸುರೇಶ ಗುಳೇದ, ಭೀಮಣ್ಣ ಬೋಸಗಿ ಪ್ರಾಂಶುಪಾಲರು, ಸಿದ್ದಣ್ಣ ಹೊಸ ಗೌಡರು ಉಪ ಪ್ರಾಂಶುಪಾಲರು, ಶರಣಬಸವ ಗಚ್ಚಿನಮನಿ ಶಿಕ್ಷಣ ಸಂಯೋಜಕರು, ರಾಮಕೃಷ್ಣ ಕಲಬುರ್ಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಖಾದರ್ ಪಟೇಲ್ ಬಿ ಆರ್ ಪಿ ಸುರಪುರ, ಚೆನ್ನಪ್ಪ ಕ್ಯಾದಗಿ ಸಿಆರ್‌ಪಿ ರಂಗAಪೇಟೆ, ಲಕ್ಷ್ಮಣ ಸಿಆರ್‌ಪಿ ದೇವರಗೋನಾಲ, ಶಿವಕುಮಾರ ಹಿರೇಮಠ ಸಿ ಆರ್ ಪಿ ಸುರಪುರ, ಶಿವಕುಮಾರ ಕಮತಗಿ ಸಿಆರ್‌ಪಿ ರುಕ್ಮಾಪುರ, ಕೃಷ್ಣ ಬಿಜಾಸಪುರ ಎಪಿಎಫ್ ಸಂಯೋಜಕರು, ರಾಮಣ್ಣ ಗುಂಜಾಳ ಸಿಆರ್‌ಪಿ ಲಕ್ಷ್ಮಿಪುರ ಸೇರಿದಂತೆ ಭಾಗವಹಿಸಿದ್ದ ಎಲ್ಲ ಶಾಲೆಯ ಪ್ರಧಾನ ಗುರುಗಳು ಹಾಗೂ ಕೆಪಿಎಸ್ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.






















