ಬೀದರ:ಸೆ.8:ವೇದಮೂರ್ತಿ ಶ್ರೀ ಸಿದ್ದಲಿಂಗೇಶ ಬೋರಂಚಿ ಸ್ವಾಮಿಜಿಯ ನೇತೃತ್ವದಲ್ಲಿ ಮತ್ತು ವೇದಮೂರ್ತಿ ಶ್ರೀ ರಾಜಮಲ್ಲಯ್ಯ ಬೋರಂಚಿ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ತಪೆÇೀನುಷ್ಠಾನ ಮುಕ್ತಾಯ ಸಮಾರಂಭ ನಗರದ ಕೆ.ಇ.ಬಿ ರಸ್ತೆಯ ಶ್ರೀ ಶಂಭುಲಿಂಗ ಕಲ್ಯಾಣ ಮಂಟಪದಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು.
ಪರಮಪೂಜ್ಯ ಶ್ರೀ ಕಾಶಿನಾಥ್ ಮಹಾರಾಜ್ ಅವರು ಘನಧ್ಯಕ್ಷತೆಯನ್ನು ವಹಿಸಿ, ಶ್ರೀ ಗಣೇಶ ಮಹಾರಾಜ್ ದಿವ್ಯ ಸಾನಿಧ್ಯದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸದೃಪಾನಂದ ಸ್ವಾಮೀಜಿ, ಶ್ರೀ ಅಮೃತಪ್ಪ ಪೂಜಾರಿ ಮತ್ತು ಶ್ರೀ ಗುರುಪಾದಯ್ಯ ಸ್ವಾಮಿಜಿಗಳು ತಮ್ಮ ಪ್ರಾರ್ಥನಾ ಸಾನಿಧ್ಯವನ್ನು ನೀಡಿದ್ದಾರೆ.
ಈ ಧಾರ್ಮಿಕ ಸಮಾರಂಭದಲ್ಲಿ ಭಕ್ತರಿಂದ ಓಂ ನಮಃ ಶಿವಾಯ ಸ್ವಾಮಿಜಿಯವರಿಗೆ ತುಲಾಭಾರ ಸೇವೆ ನಾಣ್ಯ ಹಾಗೂ ಸಕ್ಕರೆಯಿಂದ ತುಲಾಭಾರ ಸೇವೆ ಸಲ್ಲಿಸಲಾಯಿತು.
ಸಹೃದಯ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಶ್ರಾವಣ ಮಾಸದ ಮಹತ್ವ ಮತ್ತು ಭಗವಂತನ ನಾಮಸ್ಮರಣೆಯ ಪ್ರಾಮುಖ್ಯತೆಯನ್ನು ಆನಂದದಿಂದ ಅನುಭವಿಸಿದರು. ಕಾರ್ಯಕ್ರಮದಲ್ಲಿ ಮಹಾಪ್ರಸಾದ ವಿತರಣೆ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಅನುಭವ ಉಂಟುಮಾಡಲಾಯಿತು.
ಈ ಸಮಾರಂಭವು ಧಾರ್ಮಿಕತೆ, ಭಕ್ತಿಪೂರ್ವಕತೆ ಹಾಗೂ ಸಮುದಾಯ ಸೇವೆಯ ಒಗ್ಗಟ್ಟುತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.























