
ಚನ್ನಮ್ಮನ ಕಿತ್ತೂರು,ಡಿ.೨೯: ಜ್ಞಾನಕ್ಕಿಂತ ಶಕ್ತಿ ಇನ್ನೊಂದಕ್ಕಿಲ್ಲ. ಜ್ಞಾನ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬಹುದು ಎಂದು ಪದವಿಧರ ಕ್ಷೇತ್ರದ ವಿಪ ಸದಸ್ಯ ಹನಮಂತ ನಿರಾಣಿ ಹೇಳಿದರು.
ತಾಲೂಕಿನ ಕಲಂಭಾವಿ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಮಾರೋಪ ಸಮಾಂರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನಕ್ಕಿಂತ ಇನ್ನೊಂದಿಲ್ಲ ಎಂಬುವುದನ್ನು ಅರಿತು ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ನಾವುಗಳೆಲ್ಲರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೇಲ್ಲರ ಜವಾಬ್ದಾರಿ. ಕೇವಲ ಅಕ್ಷರಭ್ಯಾಸಕ್ಕಾಗಿ ಅಥವಾ ಮಾರ್ಸ ಕಾರ್ಡಿಗಾಗಿ ಶಿಕ್ಷಣ ಪಡೆಯುವುದಲ್ಲಾ. ಅದರಿಂದ ಸರ್ವಾಗೀಣ ಅಭಿವೃದ್ಧಿ ಹೊಂದಬೇಕು. ಕೃಷಿ, ವ್ಯಾಪಾರ ಹೀಗೆ ಹಲವು ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯ. ಕೇವಲ ಸರ್ಕಾರಿ ನೌಕರಿಗಾಗಿ ಶಿಕ್ಷಣ ಪಡೆಯುವುದಲ್ಲಾ. ನಮ್ಮ ವ್ಯಕ್ತಿತ್ವ ವಿಕಸಕ್ಕಾಗಿ ಶಿಕ್ಷಣ ಅವಶ್ಯ. ಹೀಗೆ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ತಂದೆ-ತಾಯಿ, ಗುರುವಿನ ಪಾತ್ರ ಮಹತ್ವದ್ದು. ಪ್ರಧಾನಿ ನರೇಂದ್ರ ಮೋದಿಜೀಯವರ ವಿಚಾರದಂತೆ ಸಂಸ್ಕಾರಯುತ ಮತ್ತು ವ್ಯಕ್ತಿತ್ವ ನಿರ್ಮಾಣ ಮಾಡುವಂತಾ ರಾಷ್ಟಿçÃಯ ನೀತಿಯನ್ನು ಜಾರಿಗೆ ತಂದರು.
ದೇಶಕ್ಕಾಗಿ ಪ್ರಾಣ ತೆತ್ತ ಚನ್ನಮ್ಮಾಜೀ ಹಾಗೂ ಸಂಗೋಳ್ಳಿ ರಾಯಣ್ಣನ ಇತಿಹಾಸ ಮಕ್ಕಳಿಗೆ ತಿಳಸಬೇಕು. ಮಕ್ಕಳು ಹೊರಗಿನಿಂದ ಒಳಗೆ ಬಂದರೆ ಟಿವಿ, ಮೊಬೈಲ್, ಬಂದ ಮಾಡಿ ಅವರಿಗೆ ಅಭ್ಯಾಸಿಸಲು ತಿಳಿಹೇಳಿ ಹಾಗಾಗಿ ನಾವೆಲ್ಲರೂ ಶಿಕ್ಷಣಕ್ಕೆ ಕೈಜೋಡಿಸಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ ನಿರ್ದೇಶಕ ನಾನಾಸಾಹೇಬ ಪಾಟೀಲ ಮಾತನಾಡಿ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯಬೇಕಾದರೆ ಶಿಕ್ಷಣ ಅವಶ್ಯ ಎಂದರು. ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣವರ ಮಾತನಾಡಿ ಮಕ್ಕಳು ಸಂಸ್ಕಾರವAತರಾಗಬೇಕಾದರೆ ತಂದೆ-ತಾಯಿ, ಗುರುವಿನ ಪಾತ್ರ ಮಹತ್ವದ್ದು ಎಂದರು. ಸಭೆಯ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಶಿವನವ್ವ ಕರಡಿ ವಹಿಸಿಕೊಂಡಿದ್ದರು.






















