೨೬ರಂದು ಬೃಹತ ಹೋರಾಟಕ್ಕೆ ಸಜ್ಜಾದ ಪೌರಕಾರ್ಮಿಕರು

ಜೇವರ್ಗಿ :ಮೇ.೨೫: ಪುರಸಭೆ ಎದುರು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಮೂರು ತಿಂಗಳು ಸಮಿಪಿಸುತ್ತಲಿದೆ ಸಂಯೋಜಿತ ಎ ಐ ಟಿ ಯು ಸಿ ಪೌರಕಾರ್ಮಿಕರ ಸತ್ಯಾಗ್ರಹಕ್ಕೆ ಕೈ ಜೋಡಿಸಿದೆ. ಬಂಧುಗಳೇ, ತಲತಲಾಂತರದಿAದ ಶೋಷಿತ ಸಮುದಾಯಗಳನ್ನು ಶೋಷಣೆ ಮಾಡಿಕೊಂಡು ಬರಲಾಗಿದೆ ಇದಕ್ಕೆ ಹಲವಾರು ಕಾರಣಗಳಿವೆ ನಮ್ಮನ್ನಾಳಿದ ಸರ್ಕಾರಗಳು ಸಂವಿಧಾನ ದತ್ತವಾದ ಹಕ್ಕಿನಿಂದ ಕೆಳವರ್ಗದ ಸಮುದಾಯಕ್ಕೆ ಒಂದಿಲ್ಲೊAದು ರೀತಿಯಲ್ಲಿ ವಂಚಿಸಿ ಕೊಂಡು ಬರಲಾಗಿದೆ ಬಾಬಾಸಾಹೇಬ್ ಡಾಕ್ಟರ್ ಅಂಬೇಡ್ಕರ್ ಅವರ ಹೋರಾಟದ ಪರಿಣಾಮವಾಗಿ ಶೋಷಿತ ಸಮುದಾಯಗಳು ಸ್ವಲ್ಪ ಮಟ್ಟಿಗೆ ಕಣ್ಣು ಮಿಟುಕಿಸುವಂತಾಗಿದೆ ಸಂವಿಧಾನ ದತ್ತವಾದ ಹಕ್ಕು ಕೇಳುವಂತಿಲ್ಲ ಕೇಳಿದರೆ ಅದೇ ಸುಳ್ಳು ಭರವಸೆ ಹಾಗಾಗಿ ಇನ್ನು ದಲಿತರ ಸ್ಥಿತಿ ಚಿಂತಾಜನಕವಾಗಿದೆ.ಬಾಬಾಸಾಹೇಬರ ಮೀಸಲಾತಿ ಸೌಲಭ್ಯದಿಂದ ಮುಂದೆ ಬಂದ ನೌಕರರ ವರ್ಗ ತಮ್ಮ ಸ್ವಾರ್ಥಕ್ಕೆ ಬಿದ್ದುಹೋಗಿದೆ ತನ್ನ ಸಮಾಜದ ಕಡೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಅದಕ್ಕೆ ರಾಜಕೀಯ ಮುಖಂಡರು ಹೊರತಾಗಿಲ್ಲ. ಜೇವರ್ಗಿ ಪುರಸಭೆಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಹದಿನಾರು ಜನ ದಲಿತ ಪೌರಕಾರ್ಮಿಕರು ಕೆಲಸ ಮಾಡಿದ್ದಾರೆ, ಬೆಳಿಗ್ಗೆ ಐದು ಗಂಟೆಗೆ ಎದ್ದು ಜೇವರ್ಗಿ ಪಟ್ಟಣವನ್ನು ಸ್ವಚ್ಚತೆ ಗೊಳಿಸಿದ್ದಾರೆ ಆದರೆ ಪುರಸಭೆ ಅಧಿಕಾರಿಗಳು ಅಮಾಯಕ ಪೌರಕಾರ್ಮಿಕರನ್ನು ವಂಚಿಸಿ ಅವರ ದಾಖಲೆಯನ್ನು ನಾಶ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಪಟ್ಟಣದ ಹೊಲಸು ತೆಗೆದು ಯಾರು ಮಾಡದ ಕೆಲಸವನ್ನು ದಲಿತ ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಚತೆ ಮಾಡಿಕೊಂಡು ಬರುತ್ತಿದ್ದರು ಸರ್ಕಾರದ ಆದೇಶದಂತೆ ಅವರನ್ನು ಖಾಯಂ ಮಾಡುವ ಸಂದರ್ಭದಲ್ಲಿ ಅವರ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿದರೆ ಹದಿನಾರು ಜನ ಪೌರಕಾರ್ಮಿಕರು ಖಾಯಂ ಪೌರಕಾರ್ಮಿಕ ನೌಕರರಾಗುತ್ತಿದ್ದರು ಆದರೆ ಅಧಿಕಾರಿಗಳ ಕುತಂತ್ರದಿAದ ಬಿಸಿಲು ಮಳೆ ಎನ್ನದೇ ಧರಣಿ ಸತ್ಯಾಗ್ರಹ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ ಸತ್ಯಾಗ್ರಹ ನಡೆಸುತ್ತಿರುವ ಪೌರಕಾರ್ಮಿಕರು ತಮ್ಮನ್ನು ವಂಚಿಸಿದ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.ಬಿಸಿಲು ಮಳೆ ಎನ್ನದೇ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪೌರಕಾರ್ಮಿಕರ ಬೆಂಬಲಕ್ಕೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಹಾಗೂ ಪ್ರಗತಿಪರ ಸಂಘಟನೆಗಳು ರಾಜಕೀಯ ಮುಖಂಡರು ಪೌರಕಾರ್ಮಿಕರ ನ್ಯಾಯ ಸಮ್ಮತವಾದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ದಿನಾಂಕ ೨೬.೫.೨೦೨೫ಕ್ಕೆ ಬ್ರಹತ್ ಪ್ರತಿಭಟನಾ ಚಳುವಳಿಯನ್ನು ಹಮ್ಮಿಕೊಂಡಿದೆ.ಹದಿನೈದು ವರ್ಷಗಳ ಕಾಲ ಪಟ್ಟಣದ ಹೊಲಸನ್ನು ತೆಗೆದು ಹಾಕಿ ಸ್ವಚ್ಚತೆ ಮಾಡಿಕೊಂಡು ಬಂದ ಪೌರಕಾರ್ಮಿಕರ ಕುಟುಂಬಗಳು ಬಿದಿಗೆ ಬಿದ್ದಿವೆ ಅವರ ನ್ಯಾಯ ಸಮ್ಮತವಾದ ಹೋರಾಟಕ್ಕೆ ಸಹಕಾರ ನೀಡಿ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ.