ಅಂತೋಣಿ ದೇವಾಲಯದಲ್ಲಿ ಕ್ರಿಸ್ತೋತ್ಸವ

ಕೆ.ಆರ್.ಪುರ, ಡಿ.೨೨- ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ಟಿಸಿಪಾಳ್ಯದ ಅಂತೋಣಿ ದೇವಾಲಯದಲ್ಲಿ ಕ್ರಿಸ್ತೋತ್ಸವವನ್ನು ಅದ್ಧೂರಿಯಿಂದ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕ್ರೈಸ್ತ ಧರ್ಮ ಗುರು ಸಿ .ಫ್ರಾನ್ಸಿಸ್ ಅವರು ಮಾತನಾಡಿ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಯೇಸುಕ್ರಿಸ್ತ ನಮ್ಮೆಲ್ಲರಿಗೂ ಮಾದರಿ, ಕ್ರೈಸ್ತರಿಗೆ ಮಾತ್ರವಲ್ಲದೆ ಕ್ರೈಸ್ತೇತ್ತರರಿಗೂ ಪ್ರೇರಣೆ, ಮಾನವ ಧರ್ಮ ಒಂದೇ ಎಂದು ಸಾರುವ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿಕೊಟ್ಟರು.

ಪ್ರತಿವರ್ಷದಂತೆ ಈ ವರ್ಷವು ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಲಾಗುತ್ತಿದೆ, ಏಸು ಕ್ರಿಸ್ತ ಸಮಸ್ತ ಪ್ರಪಂಚಕ್ಕೆ ಒಳಿತು ಮಾಡಲಿ ಪ್ರಾರ್ಥನೆ ಮಾಡಲಾಗಿದೆ ಎಂದು ನುಡಿದರು.

ಸಮಾಜ ಸೇವಕ ಪ್ರವೀಣ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ
ಟಿಸಿಪಾಳ್ಯ,ಆನಂದಪುರ ಗ್ರಾಮಸ್ಥರ ಸಹಕಾರದೊಂದಿಗೆ ಉತ್ಸವ ಅದ್ದೂರಿಯಾಗಿ ನೇರವೇರಿದೆ ಎಂದು ಹೇಳಿದರು.

ವಿವಿಧ ಸ್ಥಬ್ಧ ಚಿತ್ರಗಳ ಮೆರವಣಿಗೆ ಯೇಸುಕ್ರಿಸ್ತನಿಗೆ ಜೈಕಾರ ನೃತ್ಯ ನಾದಗಳ ಸಮಾಗಮ ಮೆರವಣಿಗೆಯಲ್ಲಿ ಕಂಡುಬಂದರೆ ಚರ್ಚ್ ನ ಆವರಣದಲ್ಲಿ ಭಕ್ತಿಗೀತೆಗಳ ಸಂಗೀತ ರಸಮಂಜರಿ ಮನ ಮುಟ್ಟಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಎಸಿಪಿ ರೀಣಾ ಸುವರ್ಣ,ಉಮಾಶಂಕರ್ ,ಸಮಾಜ ಸೇವಕ ಪ್ರವೀಣ್ ರೆಡ್ಡಿ,ಇನ್ಸ್ ಪೆಕ್ಟರ್ ರಾಮಮೂರ್ತಿ, ಮಾಜಿ ಪಾಲಿಕೆ ಸದಸ್ಯ ಅಂತೋಣಿ ಸ್ವಾಮಿ,ಅರಳಪ್ಪ,ಬಾಸ್ಕೋ,ಅಂತೋಣಿ ರಾಜ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.