Home ಜಿಲ್ಲೆ ಕಲಬುರಗಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಚಿಂಚೋಳಿ ತಾಲೂಕು ಸಡಗರದ ಹೋಳಿ ಹಬ್ಬ ಆಚರಣೆ

ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಚಿಂಚೋಳಿ ತಾಲೂಕು ಸಡಗರದ ಹೋಳಿ ಹಬ್ಬ ಆಚರಣೆ

ಚಿಂಚೋಳಿ:ಮಾ.5:ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಅವರು
ಹೋಳಿ ಹಬ್ಬದ ಅಂಗವಾಗಿ ಯುವಕರ ಅವರಿಗೆ ಬಣ್ಣವನ್ನು ಹಚ್ಚಿದರು ಅದೇ ರೀತಿ ಚಿಂಚೋಳಿ
ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು ಜಾತಿ-ಮತದ ಭೇದ ಮರೆತು ಸಾರ್ವಜನಿಕರು ಪರಸ್ಪರ ಬಣ್ಣ ಹಚ್ಚುವ ಮೂಲಕ ಕಾಮನ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬೆಳಿಗ್ಗೆಯಿಂದಲೇ ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಗ್ರಾಮೀಣ ಭಾಗದ ಬೀದಿಗಳಲ್ಲಿ ಯುವಕರ ತಂಡಗಳು ಬಣ್ಣದಾಟದಲ್ಲಿ ಮಗ್ನರಾಗಿದ್ದರು. ಸಂಗೀತದ ಅಬ್ಬರಕ್ಕೆ ಯುವಕ-ಯುವತಿಯರು ಹೆಜ್ಜೆ ಹಾಕುತ್ತಾ, “ಹೋಳಿ ಹೈ” ಎನ್ನುತ್ತಾ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ, ನೀಲಿ, ಕೆಂಪು ಬಣ್ಣಗಳ ಓಕುಳಿ ಹರಿದು ಇಡೀ ವಾತಾವರಣವೇ ರಂಗುರಂಗಿನಿಂದ ಕೂಡಿತ್ತು.
ಹಬ್ಬದ ಅಂಗವಾಗಿ ತಾಲೂಕಿನ ವಿವಿಧ ಬಡಾವಣೆಗಳಲ್ಲಿ ಕಳೆದ ರಾತ್ರಿ ಶಾಸ್ತ್ರೋಕ್ತವಾಗಿ ‘ಕಾಮದಹನ’ (ಕಾಮನ ಪೂಜೆ) ನೆರವೇರಿಸಲಾಯಿತು. ಕೆಟ್ಟ ಆಲೋಚನೆಗಳು ಸುಟ್ಟು ಭಸ್ಮವಾಗಲಿ ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಸಾರ್ವಜನಿಕರು ಕಾಮನ ಮೂರ್ತಿಗೆ ಪೂಜೆ ಸಲ್ಲಿಸಿದರು ಈ ಬಾರಿ ಹೆಚ್ಚಿನ ಜನರು ರಾಸಾಯನಿಕ ಮುಕ್ತ ‘ನೈಸರ್ಗಿಕ ಬಣ್ಣ’ಗಳನ್ನು ಬಳಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದು ವಿಶೇಷವಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕು ಪೆÇಲೀಸ್ ಇಲಾಖೆಯಿಂದ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಶಾಂತಿಯುತ ಆಚರಣೆಗೆ ಸಹಕರಿಸಲು ಕೋರಲಾಗಿತ್ತು ಒಟ್ಟಾರೆಯಾಗಿ ತಾಲೂಕಿನಲ್ಲಿ ಹೋಳಿ ಹಬ್ಬವು ಸೌಹಾರ್ದತೆ ಮತ್ತು ಪ್ರೀತಿಯ ಸಂಕೇತವಾಗಿ ಯಶಸ್ವಿಯಾಗಿ ಜರುಗಿತು