
ಚಿಕ್ಕಬಳ್ಳಾಪುರ, ಫೆ.೨೩- ಮಕ್ಕಳ ಶಿಕ್ಷಣ ಅಂಕಗಳಿಗೆ ಸೀಮಿತಗೊಳದಿರಲಿ ಎಂದು ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಹಾಗೂ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಯ್ಯ ಸಲಹೆ ನೀಡಿದರು.
ಅವರು ತಾಲೂಕಿನ ದಿಬ್ಬೂರು ಗ್ರಾಮದ “ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್’ ಶಾಲಾ ಅವರಣದಲ್ಲಿ ಎಂ.ಎಂ.ಫೌಂಡೇಶನ್ ವತಿಯಿಂದ ಆಯೋಜನೆ ಮಾಡಿದ್ದ ೩ನೇ ವರ್ಷದ ಶಾಲಾ ವಾರ್ಷಿಕೋತ್ಸವ ಹಾಗೂ ಚಿಲ್ಡ್ರನ್ ವರ್ಲ್ಡ್-೨೦೨೬ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಮಕ್ಕಳ ಶಿಕ್ಷಣದ ಗುಣಮಟ್ಟದ ಕಡೆ ಹೆಚ್ಚು ಗಮನ ಕೊಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಆಗ ಮಾತ್ರ ವಿದ್ಯಾರ್ಥಿ ಕ್ರಿಯಾಶೀಲವಾಗಿರಲು ಸಾಧ್ಯವಾಗಲಿದೆ ಇದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎನ್. ಸುಕನ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಶೈಕ್ಷಣಿಕ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಕರ ಜೊತೆ ಜೊತೆ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿ ಮಕ್ಕಳ ಶಾಲಾ ಚಟುವಟಿಕೆಗಳತ್ತ ಗಮನಹರಿಸಬೇಕಿದೆ ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳು ಆರೋಗ್ಯವಂತರನ್ನಾಗಿ ಬೆಳೆಸುವುದು ನಮ್ಮ ಜವಾಬ್ದಾರಿ ಶಾಲೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಪ್ರಮುಖವಾಗಿರಲಿವೆ ಎಂಬುದನ್ನ ಅರ್ಥೈಸಿಕೊಳ್ಳಬೇಕು ಈ ಶಾಲೆಯಲ್ಲಿ ಪ್ರಾಥಮಿಕ, ಪೂರ್ವಪ್ರಾಥಮಿಕ ಮಕ್ಕಳು ಇಷ್ಟೊಂದು ಅದ್ಭುತವಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಮಾತನಾಡಿ ಶಿಕ್ಷಣದಲ್ಲಿ ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಬೆಳೆಯಬೇಕಿದೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಣವೊಂದೇ ಮಾನದಂಡವಲ್ಲ ಎಂಬುದನ್ನ ಮನಗೊಂಡಿರುವ ಶಾಲಾ ಆಡಳಿತ ಮಂಡಳಿ ಶಿಕ್ಷಣದ ಜೊತೆ ಮಕ್ಕಳಿಗೆ ಶಿಸ್ತು, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಮಾಡುತ್ತಿರುವುದು ಶ್ಲಾಘನೀಯ ಮಕ್ಕಳ ಕಲಿಕಾ ಅಭ್ಯಾಸದ ಸಮಯದಲ್ಲಿ ಪೋಷಕರಾದ ನಮ್ಮ ಮೇಲಿಯೂ ಹೆಚ್ಚು ಜವಾಬ್ದಾರಿ ಇರಬೇಕು ಎಂದು ಪೋಷಕರಿಗೆ ಸಲಹೆ ನೀಡಿದ ಅವರು ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಬೈಲ್ ಕೊಡುವುದು ಬೇಡ ಎಂದರು.
ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಕಾರ್ಯಾಧ್ಯಕ್ಷ ಡಿ ಎನ್ ಉಮೇಶ್ ಮಾತನಾಡಿ, ಶಿಕ್ಷಣವು ಕೇವಲ ಪದವಿಯಲ್ಲ, ಅದು ಬದುಕಿನುದ್ದಕ್ಕೂ ಹೊಸ ವಿಷಯಗಳನ್ನು ಕಲಿಯುವ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಉತ್ತಮ ನೈತಿಕ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿದೆ ಎಂದರು,
ಎಂ ಎಂ ಪೌಂಡೇಶನ್ ಚೇರ್ಮನ್ ಹಾಗೂ ಪ್ರಾಂಶುಪಾಲರಾದ ಕೆ.ಮಂಜುಳಾ ಮುರಳಿಧರ್ ಅವರು ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಹಮ್ಮಿಕೊಂಡ ಸಮಗ್ರ ಮಾಹಿತಿಯ ವರದಿಯನ್ನು ಸಾಕ್ಷ್ಯ ಚಿತ್ರದೊಂದಿಗೆ ವಿವರಿಸಿದ ಅವರು ಪ್ರಾಥಮಿಕಹಂತದಿಂದಲೇ ಶಿಸ್ತು ,ಸಮಯಪಾಲನೆ, ಮತ್ತು ಹಿರಿಯರನ್ನು ಗೌರವಿಸುವ ಗುಣಗಳನ್ನು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ ಎಂದರು.
ಸಾಹಿತ್ಯ ಹಾಗೂ ಹಿರಿಯ ಪತ್ರಕರ್ತ ಟಿಎಸ್ ನಾಗೇಂದ್ರಬಾಬು, ಮಾತನಾಡಿ, “ಮನೆ ಮೊದಲ ಪಾಠಶಾಲೆ” “ತಾಯಿ ಮೊದಲಗುರು” ಹೆಣ್ಣೊಂದು ಕಲಿತರೆ ಶಾಲೆ ಎಂದು ತೆರೆದಂತೆ ಎಂಬ ನಾಣ್ಣುಡಿಯನ್ನು ನಮ್ಮ ಜೀವನದಲ್ಲಿ ಮೂಡಿಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಿಸಿದಾಗ ಮುಂಬರುವ ದಿನಗಳಲ್ಲಿ ಅದೇ ವಿದ್ಯಾರ್ಥಿ ಉತ್ತಮ ಸಂಸ್ಕಾರದೊಂದಿಗೆ ಪ್ರಬುದ್ಧ ವ್ಯಕ್ತಿಯಾಗಿ ರೂಪುಕೊಳ್ಳುತ್ತಾನೆ ಎಂದರು.
























