
ಕಲಬುರಗಿ,ನ.೧೫-ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿ ಅಂಗವಾಗಿ ನಗರದ ಜಿಡಿಎ ದರಿಯಾಪುರ ಅಂಗನವಾಡಿ ಕೇಂದ್ರದಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಪಿಂಕುಬಾಯಿ ಗಾಯಕವಾಡ ಅವರು ಮಕ್ಕಳಿಗೆ ಅಂಕಲಿಪಿ ಮತ್ತು ಪಾಟಿ ವಿತರಿಸಿದರು. ಅಂಗನವಾಡಿ ಶಿಕ್ಷಕಿ ತನುಜಾ ವಾರದ್ ಮಕ್ಕಳಿಗೆ ಸಮವಸ್ತç ವಿತರಿಸಿದರು.
ಅಂಗನವಾಡಿ ಶಿಕ್ಷಕರಾದ ಸುನಂದಾ ಕಾಂಬಳೆ, ಶಕುಂತಲಾ, ವಿಜಯ¯ಕ್ಷಿö??Ã ಆರ್., ಫರಿನಾ ಬೇಗಂ, ಶಕುಂತಲಾ, ಸಹಾಯಕಿ ಕವಿತಾ ಗುತ್ತೇದಾರ, ಬಡಾವಣೆಯ ನಾಗರಿಕರು, ಮಕ್ಕಳ ಪಾಲಕರು-ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
























