
ಧಾರವಾಡ,ನ25: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಬಾಲಕಕ, ಬಾಲಕಿಯರ, ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರ ಹುಬ್ಬಳ್ಳಿ ಹಾಗೂ ಸರ್ಕಾರಿ ವೀಕ್ಷಣಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಪರುಶುರಾಮ ದೊಡ್ಡಮನಿ ರವರು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಬೇಕು ಮಕ್ಕಳು ಒಂದು ಗುರಿಯನ್ನು ಹೊಂದಿ ಆ ಗುರಿಯನ್ನು ಈಡೇರಿಸಲು ಸರ್ಕಾರ ಮತ್ತು ಸಮಾಜ ನೀಡುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ತಿಳಿಸಿದರು ನಂತರ ಮುಖ್ಯ ಅತಿಥಿಗಳಾದ ಬಿ.ವಾಯ್. ಪಾಟೀಲ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಧಾರವಾಡ ಮಾತನಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಲವಾರು ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳು ಬರುತ್ತಿದ್ದು ಇಂತಹ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮಿತಿಯು ಸದಾ ಬದ್ದವಾಗಿದ್ದು ಮಕ್ಕಳ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ನಂತರ ಮುಖ್ಯ ಅತಿಥಿಗಳಾದ ಪ್ರಕಾಶ ಹಳ್ಯಾಳ ಎಕ್ಸ್ಲೇರಟ ಇಂಡಿಯಾ ಪೌಂಡೇಶನ್ ಮಾತನಾಡಿ ಕೊವೀಡ್ ನಿಂದ ಏಕ ಪೆÇೀಷಕ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದು ಈ ಕಾರ್ಯಕ್ರಮ ನಮ್ಮ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಹಾಯ ಮಾಡಲು ಪ್ರೇರಣೆ ಆಗಿದೆ ಎಂದರು. ಇನ್ನೊಬ್ಬ ಮುಖ್ಯ ಅತಿಥಿಗಳಾದ ಈರಣ್ಣ ಬಾರಕೇರ ಉಪಾದ್ಯಕ್ಷರು ತಡಕೋಡ ಗ್ರಾಮ ಪಂಚಾಯಿತಿ ಇವರು ಮಾತನಾಡಿ ನಾನು ಸಂಕಷ್ಟ ಮಕ್ಕಳಿಗೆ ಸದಾ ಸಹಾಯ ಮಾಡುವ ಅಭಿಲಾಷೆ ಹೊಂದಿರುವೆ ಎಂದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ದೀಪಾ ಜಾವೂರ ಮಾತನಾಡಿ ಬಾಲಮಂದಿರಲ್ಲಿ ದಾಖಲಾಗುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮ ಮೇಲೆ ಇದ್ದು ನಾವು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಿದರು.

























