
ಗುಳೆದಗುಡ್ಡ,ಅ.೭: ಪಟ್ಟಣದ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ, ನಿಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಶೇಖರ ಶೀಲವಂತ, ಮಕ್ಕಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡುವುದು. ರಾಷ್ಟçದ ಬಗ್ಗೆ ಚಿಂತನೆ ಮಾಡುವ ಮನೋಭಾವ ಬೆಳೆಸಲು ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. ನಮ್ಮ ದೇಶದ ಪ್ರಧಾನಿಗಳು ದೇಶಕ್ಕೆ ನೀಡಿದ ಸೇವೆ, ಅವರ ಕೊಡುಗೆಗಳ ಬಗ್ಗೆ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪಟ್ಟಣದ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟç ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಜಾಗತಿಕವಾಗಿ ಭಾರತದ ಗೌರವ ಹೆಚ್ಚಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಎಂಬ ವಿಷಯಗಳ ಕುರಿತಾಗಿ ನಿಬಂಧ ಸ್ಪರ್ಧೆ ಹಾಗೂ ವೆಂಕಟೇಶ ಕನ್ನಡ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮಕ್ಕಳಿಗೆ ನನ್ನ ನೆಚ್ಚಿನ ಮಹಾಪುರುಷರು, ಪ್ರೌಢ ಶಾಲಾ ಮಕ್ಕಳಿಗೆ ಮೋದಿಯವರ ಚಿತ್ರ ತೆಗೆಯುವ ಸ್ಪರ್ಧೆ ನಡೆಸಲಾಯಿತು ಎಂದು ಹೇಳಿದರು.
ಅ.೯ರಂದು ಸಂಜೆ ಪಟ್ಟಣದ ಕರನಂದಿಯವರ ರಂಗಮAದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲೆಯ ಎಲ್ಲ ನಾಯಕರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ದೀಪಕ ನೇಮದಿ, ಸಂಪತ್ ರಾಠಿ, ಕಮಲು ಮಾಲಪಾಣಿ, ಗಣೇಶ ಶೀಲವಂತ, ಸಂಜು ಕಾರಕೂನ, ಗಂಗಾಧರ ಯಲಬುರ್ಗಿ, ಶಿವಾನಂದ ಯಣ್ಣಿ, ಪ್ರಶಾಂತ ಜವಳಿ, ಶ್ರೀಕಾಂತ ಭಾವಿ, ಸಿದ್ದು ಅರಕಾಲಚಿಟ್ಟಿ, ಶ್ರೀಶೈಲ ಕುಂಬಾರ, ಮಹೇಶ ಭಾರತಿ, ಬಾಲು ನಿರಂಜನ, ಭುವನೇಶ ಪೂಜಾರ, ಶಿವು ಗೋತಗಿ, ರಾಜು ಚಿತ್ತರಗಿ, ಸಿಂಧೂರ ತೊಳಮಟ್ಟಿ, ಶೀತಲ್ ಸತ್ತಿಗೇರಿ, ನಿಂಗಪ್ಪ ಯಣ್ಣಿ, ಶ್ರೀಕಾಂತ ಮಲಜಿ, ಗೋಪಾಲ ಹಳ್ಳೂರ, ಸಂಗಮೇಶ ತಿಪ್ಪಾ ಸೇರಿದಂತೆ ಇತರರು ಇದ್ದರು.





















