
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೫: ತಂದೆ ತಾಯಿಗಳ ವೃದ್ಯಾಪ್ಯ ಜೀವನದ ಇಳಿವಯಸ್ಸಿನಲ್ಲಿ ಮಕ್ಕಳು ಅವರ ಜೊತೆಗಿರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೆಡಶ್ಯಾಳ ಹೇಳಿದರು.
ನಗರದ ಮದೀನಾ ನಗರದಲ್ಲಿರುವ ಶ್ರೀ ಮಾಣಿಕೇಶ್ವರಿ ಹಾಗೂ ಚೈತನ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಚೈತನ್ಯ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಿಗೆ ನೈತಿಕ ಮೌಲ್ಯ ಸಿಗಬೇಕು. ಅಂದಾಗ ಮಾತ್ರ ಮಕ್ಕಳು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳುತ್ತಾರೆ ಎಂದರು.
ಪಿಎ??? ರೇಣುಕಾ ದಿನ್ನಿ ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಮೊಬೈಲ್ ಕೊಡಬೇಕು. ಶೈಕ್ಷಣಿಕ ಉದ್ದೇಶ ಹೊರತುಪಡಿಸಿ ಮಕ್ಕಳು ಆ ಮೊಬೈಲ್ ನಲ್ಲಿ ಇತರೆ ಕಾರ್ಯ ಚಟುವಟಿಕೆ ಮಾಡುತ್ತಿರುತ್ತಾರೆ. ಪಾಲಕರು ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳಿಗೆ ಕಷ್ಟದ ಜೀವನದ ಅರಿವು ಮೂಡಿಸಿ ನಯ, ವಿಜಯದಿಂದ ಶಿರ ಬಾಗಿ ಶಾಲೆಗೆ ಮಗು ಬರುವಂತ ಸಂಸ್ಕಾರ ಬಿತ್ತಬೇಕು ಎಂದರು.
ಉಪನ್ಯಾಸಕ ಪಿ.ಎಸ್.ಗೌರಿ ಮಾತನಾಡಿ, ಮೊಬೈಲ್ ಬಳಕೆ ಮಾಡುತ್ತಾ ಯಾರ ಯಾರದ್ದೋ ಸ್ಟೇಟಸ್ ಹಾಕ್ತಿರಾ ಅದರ ಬದಲಾಗಿ ದೇಶಭಕ್ತಿ ಮೂಡಿಸುವ ಹಾಗೂ ಜನ್ಮ ನೀಡಿದ ತಂದೆ ತಾಯಿಯರ ಸ್ಟೇಟಸ್ ಹಾಕಬೇಕು. ನಿಮ್ಮ ಜೀವನ ರೂಪಗೊಳ್ಳುವ ಅಂಶಗಳನ್ನು ಅಳವಡಿಸಿಕೊಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಶಾಲಾ ಮಕ್ಕಳಿಂದ ವೇದಿಕೆ ಮೇಲೆ ನಾಟಕ, ಮನರಂಜನೆಯ ನೃತ್ಯಗಳು ಪ್ರದರ್ಶನವಾದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಸನ್ಮಾನಿಸಿದರು. ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿ ದಂಪತಿಗಳಿಗೆ ಶಿಕ್ಷಕ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಾಬು ಜಾಧವ, ಶಿವಾನಂದ ಮಲ್ಲೇಶಪ್ಪ ರವಿ, ಚಂದ್ರಶೇಖರ ಮೊಗೇರ, ನಗರ ಘಟಕದ ಶಿಕ್ಷಕ ಸಂಘದ ಅಧ್ಯಕ್ಷ ವೀರಭದ್ರಪ್ಪ, ಮೌಲಾಲಿ ರಬಕವಿ, ನಿತೀಶ ಪುಕಾಳೆ, ವೈಧ್ಯ ಪ್ರಸನ್ನಕುಮಾರ, ಹೀನಾಕೌಸರ, ಬಿ.ಜಿ.ಬೋಸಲೆ, ಎ.ಎನ್.ಬಿಜಾಪುರ, ರಾಜೇಂದ್ರ ಬಿರಾದಾರ, ವಿವೇಕಾನಂದ ಸಜ್ಜನ, ಬಾಬಾಗೌಡ ಪಾಟೀಲ, ಪಿ.ಎಸ್.ಗದ್ಯಾಳ, ಧನಸಿಂಗ ಮಹಾರಾಜ, ಗಂಗಾಧರ ಕಟ್ಟಿಮನಿ ಇದ್ದರು.






















