Home ಜಿಲ್ಲೆ ಕಲಬುರಗಿ ಮಕ್ಕಳಿಗೆ ಜ್ಞಾನ ಪಡೆಯಲು ಶಿಕ್ಷಣ ನೀಡಬೇಕು: ಮಾಲಾ

ಮಕ್ಕಳಿಗೆ ಜ್ಞಾನ ಪಡೆಯಲು ಶಿಕ್ಷಣ ನೀಡಬೇಕು: ಮಾಲಾ

ಕಲಬುರಗಿ:ಫೆ.9:ಮಕ್ಕಳಿಗೆ ಜ್ಞಾನ ಪಡೆಯಲು ಶಿಕ್ಷಣ ನೀಡಬೇಕು ಹಾಗೂ ತಮ್ಮದೇ ಕಾಲುಗಳ ಮೇಲೆ ನಿಲ್ಲುವಂತೆ ಮಾಡಬೇಕು ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಾಲಾ ಬಿ. ನರಾಯಣರಾವ್ ಹೇಳಿದರು.
ಅವರು ಭಾನುವಾರ ಬಸವಕಲ್ಯಾಣದಲ್ಲಿ ನಡೆದ ಐಡಿಯಲ್ ಗ್ಲೋಬಲ್ ಶಾಲೆಯ ಸಿಲ್ವರ್ ಜ್ಯೂಬಿಲಿ ಆಚರಣೆಯಲ್ಲಿ ಮಾತನಾಡಿದರು. ಮಕ್ಕಳಿಗೆ ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಮಾತ್ರವಲ್ಲದೆ ಮೂಲಭೂತ ಜ್ಞಾನ ಗಳಿಸುವ ಸಲುವಾಗಿ ಶಿಕ್ಷಣ ನೀಡಬೇಕು ಎಂದು ಅವರು ಪಾಲಕರಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಲಾವಿದ ಮೊಹಮ್ಮದ್ ಆಯಾಜುದ್ದೀನ್ ಪಟೇಲ್ ಅವರು, ಇಂದಿನ ಆಧುನಿಕ ಜಗತ್ತಿನಲ್ಲಿ ಅನೇಕ ಅವಕಾಶಗಳಿರುವುದರಿಂದ ಮಕ್ಕಳು ತಮ್ಮ ಭವಿಷ್ಯವನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಹೇಳಿದರು.
ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಅವರು ಪ್ರಾಥಮಿಕ ಹಂತದ ಮಕ್ಕಳನ್ನು ಮೊಬೈಲ್ ಫೆÇೀನ್‍ಗಳಿಂದ ದೂರವಿಡುವಂತೆ ಪಾಲಕರಿಗೆ ಎಚ್ಚರಿಕೆ ನೀಡಿದರು. ಆದರೆ ಪೂರ್ವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆನ್‍ಲೈನ್ ಕೋಚಿಂಗ್‍ಗಾಗಿ ಮೊಬೈಲ್ ಬಳಸಿ ಲಾಭ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐಡಿಯಲ್ ಮತ್ತು ಝಿಕ್ರಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ ಅವರು ಸಂಸ್ಥೆಯ 25 ವರ್ಷದ ಪ್ರಯಾಣವನ್ನು ವಿವರಿಸಿದರು.
ಎರಡು ದಿನಗಳ ಈ ಆಚರಣೆ ಶಾಲಾ ಆವರಣದಲ್ಲಿ ನಡೆದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾಪ್ತಿಯಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ತಾಲ್ಲೂಕು ಅಧಿಕಾರಿ ವೈಜಯಂತಿ ಕಡಮ್, ಬಾಬಾ ಫಕ್ರುದ್ದೀನ್ ಅನ್ಸಾರಿ, ಪ್ರಕಾಶ್, ಹಾಫಿಜ್ ಅಸ್ಲಾಂ, ಶ್ರೀಕಾಂತ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.