
ಕಲಬುರಗಿ:ಜ.5:ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ ಆದರೆ ಸಂಸ್ಕಾರದ ಕೊರತೆ ಇದೆ. ಇದನ್ನು ಪಠ್ಯಪುಸ್ತಕದ ಮೂಲಕ ಕಲಿಸಲು ಸಾಧ್ಯವಿಲ್ಲ, ಬದಲಾಗಿ ಪೆÇೀಷಕರು ಹಾಗೂ ಶಿಕ್ಷಕರು ಅದನ್ನು ತಮ್ಮ ದೈನಂದಿನ ನಡೆ ನುಡಿಗಳಲ್ಲಿ ಪಾಲನೆ ಮಾಡಿದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ, ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಪೂಜ್ಯ ಮಹಾಲಿಂಗ ಸ್ವಾಮೀಜಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಹದಿನಾರನೇ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಮಹಾಲಿಂಗ ಸ್ವಾಮೀಜಿ, ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಇಸ್ರೋ ಹಾಗೂ ಎನ್ ಎಎಲ್ ಸಂಸ್ಥೆಗೆ ಭೇಟಿ ನೀಡಿದ 33 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿಯ ಜಿಲ್ಲಾ ಪಂಚಾಯತ್ ಮಾಜಿ ಅದ್ಯಕ್ಷ ನಿತಿನ್ ಗುತ್ತೇದಾರ ಹಾಗೂ ವಿಜಯ ವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಬಾಬುರಾವ್ ಯಡ್ರಾಮಿ ಆಗಮಿಸಿದ್ದರು. ಸಾರ್ವಜನಿಕ ಕ್ಷೇತ್ರ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿರುವ ಸೇವೆಗೆ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಸುವರ್ಣ ಭಗವತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.
ಶಾಲಾ ವಾರ್ಷಿಕ ವರದಿಯ ಬಳಿಕ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಭಾವೈಕ್ಯ, ದೇಶಪ್ರೇಮ ಸಾರುವ ನೃತ್ಯಗಳು ವೀಕ್ಷಕರ ಮೆಚ್ಚುಗೆ ಪಡೆದವು. ವಿಶೇಷವಾಗಿ ಐತಿಹಾಸಿಕ, ಛತ್ರಪತಿ ಸಂಭಾಜಿ ನೃತ್ಯ ಎಲ್ಲರ ಗಮನ ಸೆಳೆಯಿತು. ಯುವಿ ಲೈಟ್ ಡಾನ್ಸ್ ವಿಶೇಷ ಆಕರ್ಷಣೆಯಾಗಿತ್ತು.
ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿ, ಅಭ್ಯಾಸದ ಜೊತೆಗೆ ಕ್ರೀಡೆ, ಸಂಗೀತ, ನೃತ್ಯಗಳಂತಹ ಚಟುವಟಿಕೆಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮಗೊಳಿಸುತ್ತವೆ. ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ, ಉತ್ತಮ ಪುಸ್ತಕ ಓದುವ ರೂಢಿ ಹಾಕಿ ಎಂದು ಪೆÇೀಷಕರಿಗೆ ಮನವಿ ಮಾಡಿದರು. ಸುಮಾ ಭಗವತಿ ಸ್ವಾಗತಿಸಿದರು, ಶಾಲಾ ಶಿಕ್ಷಣ ಸಂಯೋಜಕ ನಿಖಿಲ್ ಪಾಟೀಲ್ ವಂದಿಸಿಸಿದರು.
ವೇದಿಕೆಯಲ್ಲಿ, ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಶಶಿಕಲಾ ಕವಿಶೆಟ್ಟಿ, ಎಸ್.ಎಸ್.ಹಿರೇಮಠ, ಡಾ.ಕಲ್ಲಿನಾಥ ಪಾಟೀಲ್, ಪರ್ವತ್ ಬಿಜಾಸ್ಪೂರ, ಶಾಲೆಯ ಮುಖ್ಯೋಪಾದ್ಯಾಯಿನಿ ಅಂಬಿಕಾ ರೆಡ್ಡಿ ಹಾಗೂ ಪೆÇೀಷಕರು ಉಪಸ್ಥಿತರಿದ್ದರು.

























