
ಲಕ್ಷ್ಮೇಶ್ವರ,ನ15: ಮಕ್ಕಳು ಮನುಕುಲದ ವಾರಸುದಾರರಾಗಿದ್ದು ಅವರ ಸರ್ವಾಂಗೀಣ ಪ್ರಗತಿಗಾಗಿ ಸಮುದಾಯ ಸರ್ಕಾರ ಶಾಲಾ ಆಡಳಿತ ಪಾಲಕರು ಶಿಕ್ಷಕರು ಸಮನ್ವಯ ಸಾಧಿಸಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರ ಕೃಷ್ಣಪ್ಪ ಹೇಳಿದರು.
ಅವರು ತಾಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಸಸಿಗೆ ನೀರರೆಯುವ ಮೂಲಕ ಉದ್ಘಾಟಿಸಿ ತಾಲೂಕ ಮಟ್ಟದ ಪೆÇೀಷಕ ಶಿಕ್ಷಕರ ಸಭೆಯನ್ನು ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ನಾಗರಿಕರು ಅವರಲ್ಲಿ ದೇಶಪ್ರೇಮ ರಾಷ್ಟ್ರ ಪ್ರೇಮ ದೇಶಭಕ್ತಿ ಮತ್ತು ಸಂಸ್ಕಾರ ಸಂಸ್ಕೃತಿಗಳನ್ನು ಮೂಡಿಸಬೇಕು ಎಂದು ಇದರಲ್ಲಿ ಸಮಾಜ ಸಮುದಾಯ ಇಲಾಖೆಯ ಪಾತ್ರವೂ ಮಹತ್ವದ್ದು ಎಂದು ಹೇಳಿದರು.
ಬಿ ಆರ್ ಪಿ ಈಶ್ವರ್ ಮೆಡ್ಲೇರಿ ಪ್ರಾಥಮಿಕ ಮಾತನಾಡಿ ಪೆÇೀಷಕ ಶಿಕ್ಷಕರು ಇಂದಿನ ಸಭೆಯಲ್ಲಿ ಕಲಿಕಾ ಪ್ರಗತಿ ಹಾಜರಾತಿ ಕಲಿಕಾ ಸಾಮಗ್ರಿಗಳು ಕಲಿಕಾ ಸೇರಿದಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಕೆ ವೈ ಮೇಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಆಟೋಟ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಮೋಗಿ ಮಠದ ಸಿದ್ದಯ್ಯ ಅಮೋಗಿ ಮಠ ಎಸ್ ಡಿ ಎಂ ಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ ರಜಿಯಾಬೇಗಂ ನದಾಫ ವೀಣಾ ಅಕ್ಕಿ ಶೇಖಣ ಸಾಸಲವಾಡ ವಿರುಪಾಕ್ಷಪ್ಪ ಮೂಕಿ ಉಮೇಶ್ ರಗಟ್ಟಿ ಚಿನ್ನಪ್ಪ ಗೌಡ ಪಾಟೀಲ ಮಂಜುನಾಥ ರಗಟಿ ಶಂಕ್ರಪ್ಪ ಮೂಕಿ ನಿಂಗಪ್ಪ ಹೊಸೂರ ಬಸಣ್ಣ ಮಾಗಡಿ ಲಕ್ಷ್ಮಣ ಅತ್ತಿಗೇರಿ ಸೇರಿದಂತೆ ಅನೇಕರು ಇದ್ದರು.
ಗಿರೀಶ್ ನೇಕಾರ್ ಪಿಟಿ ಲಮಾಣಿ ನಾಗರಾಜ್ ಭಜಂತ್ರಿ ರೇಖಾ ನಿರ್ವಹಿಸಿದರು.

























