“ಮಕ್ಕಳು ಭೂಮಿ ಮೇಲಿನ ನಕ್ಷತ್ರಗಳು” : ಡಿಡಿಪಿಐ ಮಹೇಶ ಪೋತದಾರ

ಕೊಲ್ಹಾರ:ಜ.25: ಮಕ್ಕಳು ಭೂಮಿ ಮೇಲಿನ ನಕ್ಷತ್ರಗಳು, ಬದುಕು ಸಾರ್ಥಕವಾಗಬೇಕಾದರೆ ಮಕ್ಕಳೇ ಚೆನ್ನಾಗಿ ಓದಿ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೆÇೀತದಾರ ಹೇಳಿದರು.
ಶುಕ್ರವಾರ ಪಟ್ಟಣದ ಸಮೀಪದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳೇ ಇದ್ದವರು, ಇಲ್ಲದವರು ಎಂದು ಗುದ್ದಾಡಬೇಡಿ, ಇದ್ದವರೇನು ಚಿನ್ನ ತಿನ್ನಲ್ಲ, ಇಲ್ಲದವರೇನು ಮಣ್ಣು ತಿನ್ನಲ್ಲ, ಎಲ್ಲರೂ ತಿನ್ನುವುದೇ ಅನ್ನನ್ನೆ, ಕೊನೆಗೆ ಸೇರುವುದು ಮಣ್ಣನ್ನೆ ಹೀಗಾಗಿ ತಾವು ಜೀವನಪೂರ್ತಿ ಈ ಮಾತನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು.
ನಮ್ಮಲ್ಲಿ ಸಮಾನತೆಯ ತತ್ವವಿರಬೇಕು, ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ ಸಂವಿಧಾನದ ಕನಸುಗಳನ್ನು ಈಡೇರಿಸಬೇಕು.ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿ ಬರಬೇಕು.ಯಾವುದೇ ಕಾರಣಕ್ಕೂ ನಿಮ್ಮಲ್ಲಿ ನನ್ನಿಂದ ಏನೂ ಆಗುವುದಿಲ್ಲ, ಏನೂ ಬರುದಿಲ್ಲ ಎಂಬ ಕೀಳರಿಮೆ ಬರಬಾರದು, ನಿಮ್ಮಲ್ಲಿ ಭಗವಂತ ಒಂದು ದೊಡ್ಡ ಶಕ್ತಿ ಕೊಟ್ಟಿದ್ದಾನೆ ಅದನ್ನ ನೀವು ಅರ್ಥ ಮಾಡಿಕೊಳ್ಳಿ.ಪ್ರಯತ್ನ ಮಾಡಿದರೆ ಜಗತ್ತನ್ನೆ ಗೆಲ್ಲ ಬಹುದು ಎಂದರು.
ಪಾಲಕರು ಮಕ್ಕಳ ಮೇಲೆ ತಮ್ಮ ಆಸೆಗಳನ್ನು, ಕನಸುಗಳನ್ನು ಈಡೇರಿಸಲು ಒತ್ತಾಯಿಸಿಬೇಡಿ.ನಿಮ್ಮ ಮಕ್ಕಳು ಯಾವುದರಲ್ಲಿ ಪ್ರವೀಣರಿದ್ದಾರೆ, ತರಬೇತಿ ಕೊಟ್ಟರೆ ಯಶಸ್ವಿಯಾಗತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.ಅವರವರ ಕನಸನ್ನು ಅವರಿಗೆ ಈಡೇರಿಸಲು ಬಿಡಿ ಮುಂದೆ ಅವರು ಈ ನಾಡಿನ ದೊಡ್ಡ ಅಸ್ತಿ, ಸಂಪತ್ತು ಆಗತಾರೆ ಎಂದರು.
ಸಾಹಿತಿ ಹಾಗೂ ಮಡಿಕೇಶ್ವರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಬಿ ಎಸ್ ಹಂಚಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿ, ಮಕಳೇ ನಮಗೆ ಸಿನೆಮಾ ಹೀರೊಗಳು ಹೀರೊ ಅಲ್ಲ, ಜನ್ಮ ಕೊಟ್ಟ ತಂದೆ ತಾಯಿ, ಅನ್ನ ಹಾಕುವ ರೈತ, ದೇಶ ಕಾಯುವ ಸೈನಿಕ, ಅಕ್ಷರ ಕಲಿಸುವ ಶಿಕ್ಷಕರು ನಮ್ಮ ಪಾಲಿನ ಹೀರೋಗಳು ಹೀಗಾಗಿ ನಾವು ಅವರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಎಸ್ ಎಸ್ ಎಲ್ ಸಿ ಓದುವ ವಿದ್ಯಾರ್ಥಿನಿಯರು ಬರುವ ದಿನಗಳಲ್ಲಿ ಚೆನ್ನಾಗಿ ಓದಿ ಪರೀಕ್ಷೆ ಬರೆದು ಒಳ್ಳೆಯ ಅಂಕ ಪಡೆದುಕೊಂಡು ಜಿಲ್ಲೆಯಲ್ಲಿ ಮೊದಲಿಗೆ ಕೊಲ್ಹಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ಉಪನಿರ್ದೇಶಕರ ಕಡೆಯಿಂದ ಮೊದಲು ಸನ್ಮಾನ ಮಾಡಿಸಿಕೊಳ್ಳಬೇಕು ಆ ಭಾಗ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ವಸತಿ ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಸಮಾರಂಭದ ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಗೋವಿಂದ ವಾಲಿಕಾರ ವಹಿಸಿದ್ದರು. ಮುಖ್ಯಅತಿಥಿಗಳಾಗಿ ನಾಗಠಾಣ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲ ಡಿ ಎಂ ಚಲವಾದಿ, ಗಂಗಪ್ಪ ಏಳಗಂಟಿ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.