
ವಾಡಿ:ಫೆ.2: ಅನಕ್ಷರಸ್ಥ ಪೆÇೀಷಕರ ಅಜ್ಞಾನದಿಂದ ಸಮಾಜದಲ್ಲಿ ಅನಿಷ್ಟ ಪದ್ಧತಿಗಳು ಜಾರಿಯಲ್ಲಿವೆ. ಬಾಲ್ಯ ವಿವಾಹ ಮತ್ತು ಅಪೌಷ್ಟಿಕತೆ ತಾಯಿ ಮರಣಕ್ಕೆ ಕಾರಣವಾಗುತ್ತದೆ ಎಂದು ಕ್ರೈ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ರಾಹುಲ್ ಮಾಳಗೆ ಎಚ್ಚರಿಸಿದರು.
ಕೊಂಚೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೈ ಸಂಸ್ಥ ವತಿಯಿಂದ ಏರ್ಪಡಿಸಲಾಗಿದ್ದ ಹೆಣ್ಣುಮಕ್ಕಳ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಮಾಜವನ್ನು ಬೆಳಗುವ ಹೆಣ್ಣುಮಕ್ಕಳು ಅಪೌಷ್ಠಿಕತೆಯಿಂದ ಬಳಲುಬಾರದು ಎಂಬ ಕಾರಣಕ್ಕೆ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಪ್ರತಿ ತಿಂಗಳು ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಹದಿನೆಂಟು ತುಂಬದ ಬಾಲಕಿಯರ ಮದುವೆ ಮಾಡುವುದು ಅಪರಾಧವಾಗಿದೆ. ಇದಕ್ಕೆ ಶಿಕ್ಷೆಯಿದೆ ಎಂದು ಜಾಗೃತಿ ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಹೆಣ್ಣು ಮಕ್ಕಳ ಧಾಖಲಾತಿ ಕಡಿಮೆಯಾಗುತ್ತಿದ್ದು. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ಹೆಣ್ಣು ಮಗು ಉನ್ನತ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಘನತೆ ಗೌರವದಿಂದ ಬಾಳಬೇಕು. ಪೆÇೀಷಕರು ಹೆಣ್ಣು ಗಂಡು ಎಂಬ ಲಿಂಗ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲಕೀಯರು ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಈ ಕಾರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬೇಟಿ ಬಚಾವ್ ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಬಾಲಿಕಾ ಸಮೃದ್ಧಿ ಯೋಜನೆ, ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪೆÇ್ರೀತ್ಸಾಹ ಧನ, ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಅನೇಕ ಕಾರ್ಯಕ್ರಮಗಳು ಹೆಣ್ಣು ಮಕ್ಕಳಿಗಾಗಿ ಮೀಸಲಿವೆ. ಪೆÇೀಷಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಮುಖ್ಯಶಿಕ್ಷಕ ಮಣಿಸಿಂಗ್ ಚೌವ್ಹಾಣ, ಭೋಜಪ್ಪ ಜೇವೂರ, ಶಿಕ್ಷಕರಾದ ಪರಮೇಶ್ವರ ಎಲ್, ಶ್ರೀದೇವಿ ಎನ್, ಶಿವಲಿಂಗಮ್ಮ ಬಿ, ರೇವಣಸಿದ್ದಯ್ಯ ಸ್ವಾಮಿ, ಮೀನಾಕ್ಷಿ ಡಿ, ನಾಗರಾಜ ಅಂಬಣ್ಣ, ಶ್ರೀಕಾಂತ ಬಿ, ಮರೆಪ್ಪ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕ್ರೈ ಸಂಸ್ಥೆಯ ಸಿಬ್ಬಂದಿ ಶ್ವೇತಾ ಸ್ವಾಗತಿಸಿದರು. ಶಿಲ್ಪಾ ಎಚ್.ಎಸ್ ನಿರೂಪಿಸಿ, ವಂದಿಸಿದರು.

























