೨೦ ಕೋಟಿ ವೆಚ್ಚದಲ್ಲಿ ಚಿಕ್ಕತಿರುಪತಿ ಅಭಿವೃದ್ಧಿ

ಮಾಲೂರು, ಆ. ೧೮- ಇತಿಹಾಸ ಪ್ರಸಿದ್ಧಯಾತ್ರಾ ಸ್ಥಳವಾದ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರುಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.ಇಂತಹ ಪವಿತ್ರವಾದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ೨೦ ಕೋಟಿಗೂಹೆಚ್ಚು ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಿದ್ದು,ಮುಖ್ಯಮಂತ್ರಿಗಳು, ಮುಜರಾಯಿ ಸಚಿವರ ಸಹಕಾರದಿಂದ ದೇಗುಲವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲಾಗುವು ದೆಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.


ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗದಲ್ಲಿ ೫ ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ೧೦೮ ಅಡಿಗಳ ರಾಜಗೋಪುರ ವೀಕ್ಷಣೆಯ ನಂತರ ದೇವಾಲಯದ ಮಾಸ್ಟರ್ ಪ್ಲಾನ್ ಕುರಿತು ಮಾತನಾಡಿದರು. ದೇವಾಲಯಕ್ಕೆ ಮೂಲಸೌಕಯ್ಯ ಕಲ್ಪಿಸುವಲ್ಲಿ ಈವರೆಗೂ ಆಡಳಿತ ನಡೆಸಿದ ಸರಕಾರಗಳು ವಿಫಲವಾಗಿವೆ. ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಸಹಕಾರದಿಂದ ವಿಶೇಷವಾಗಿ ಚಿಕ್ಕತಿರುಪತಿಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಮಾಸ್ಟರ್ ಪ್ಲಾನ್ ರೂಪಿಸಗೃಹಗಳ ನಿರ್ಮಾಣ, ೫೦ಕ್ಕೂ ಹೆಚ್ಚುವಸತಿಗೃಹಗಳು, ವಿಶ್ರಾಂತಿ ಗೃಹಗಳ ನಿರ್ಮಾಣ,ದೇವಾಲಯದ ಮುಂಭಾಗದಲ್ಲಿ ಸಾಕಷ್ಟುಮಂದಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ವತಿಯಿಂದ ೧೫೦ ಅಂಗಡಿಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದರು.


ಅನ್ನದಾಸೋಹಭವನನಿರ್ಮಾಣ:ದೇವಾಲಯದಲ್ಲಿಕಾರನಿರ್ವಹಿಸುವಅರ್ಚರಿಗೆ ರೆಸ್ಟ್ ಕೊಠಡಿ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ದೇವಾಲಯದ ಸುತ್ತಲೂ ಸುಸಜ್ಜಿತವಾದ ರಸ್ತೆಗಳ ನಿರ್ಮಾಣ, ಅನ್ನದಾಸೋಹ ಭವನವನ್ನು ನೂತನವಾಗಿ ನಿರ್ಮಿಸಲಾಗುವುದು. ಒಂದು ಬಾರಿಗೆ ೧ ಸಾವಿರ ಮಂದಿ ಭಕ್ತರು ಕುಳಿತು ಊಟ ಮಾಡಲು ಕಟ್ಟಡ ನಿರ್ಮಾಣ, ಮಹಿಳೆಯರು ಹಾಗೂ ಗಂಡಸರಿಗೆ ಪ್ರತ್ಯೇಕವಾದ ಡ್ರೆಸ್ ಕೋಡ್, ಉದ್ಯಾನವನ, ಮಕ್ಕಳ ಉದ್ಯಾನವನ, ವಾಟರ್ ಸೋಲಾರ್, ಟ್ಯಾಂಕ್ ಸೇರಿದಂತೆ ಹಲವು ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ತಿರ್ಮಾನಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಮಮೂರ್ತಿ, ರಾಜ್ಯ ರೆಡ್ಡಿ ಜನಸಂಘದರಾಜ್ಯ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ (ಕಿಟ್ಟಿ),ದೇವಾಲಯದ ಕಾರ್ಯನಿರ್ವಾಹಕಸೆಲ್ವಮಣಿ, ಪೇಷಾರ್ ವಿ.ಚೆಲುವಸ್ವಾಮಿ ಗ್ರಾಪಂ ಅಧ್ಯಕ್ಷ ಜಿ.ವಿ.ಮಂಜುನಾಥ್,ಉಪಾಧ್ಯಕ್ಷೆ ಪದ್ಮ ವೆಂಕಟೇಶ್, ಪಿಡಿಒ ಎ.ಹರೀಂದ್ರ ಗೋಪಾಲ್, ಎಸ್‌ಡಿಎ ನಾಗರಾಜಪ್ಪ,ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಎಂ.ಗೋಪಾಲ, ವಿ.ಕೃಷ್ಣಮೂರ್ತಿ, ಡಿ.ಎಲ್.ತಿಮ್ಮರಾಯಪ್ಪ, ಭಾಗ್ಯಶ್ರೀ ಎನ್.ಜಿ., ತೇಜಸ್ವಿನಿ, ಎಂ.,ಕೃಷ್ಣಾರೆಡ್ಡಿ.ಎನ್,ಟಿ.ವಿ.ಶ್ರೀನಿವಾಸನ್, ಶ್ರೀನಿವಾಸಯ್ಯ, ಸಿ.ಕುಮಾರ್, ರಾಜಶೇಖರ್, ರಘು, ಇನ್ನಿತರರುಹಾಜರಿದ್ದರು.