
ಚಿಕ್ಕಬಳ್ಳಾಪುರ.ಏ೯:ನಗರದ ಅತ್ಯಂತ ಜನ ನಿಬಿಡ ರಸ್ತೆಗಳಾಗಿರುವ ಬಜಾರ್ ರಸ್ತೆ ಗಂಗಮ್ಮನ ಗುಡಿ ರಸ್ತೆ ಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಬಹುತೇಕ ಖಚಿತವಾಗಿದೆ. ಜಿಲ್ಲಾಧಿಕಾರಿ ಪ್ರಭು.ಜಿ. ರವರು ಈ ಎರಡು ರಸ್ತೆಗಳಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಸಂಚಾರ ಮಾಡಿ ತೆರವು ಕಾರ್ಯಾಚರಣೆ ಬಗ್ಗೆ ಅಂಗಡಿ ಮಾಲೀಕರುಗಳ ಜೊತೆ ಸಮಾಲೋಚನೆ ನಡೆಸಿದರು.
ಮೇಲ್ಕಂಡ ಎರಡು ರಸ್ತೆಗಳಲ್ಲಿ ಇತ್ತೀಚಿಗೆ ನಗರಸಭೆ ಸಿಬ್ಬಂದಿಯವರು ರಸ್ತೆಯ ಮಧ್ಯಭಾಗದಿಂದ ಟೇಪ್ ಅಳತೆ ಇಟ್ಟು ಎಷ್ಟು ಅಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬುದನ್ನು ನಿಗದಿಪಡಿಸಿ ಕೆಂಪು ಪಟ್ಟಿಯನ್ನು ಹಾಕಿರುವುದು ಸಹ ಇತ್ತೀಚಿಗೆ ಕಂಡುಬಂದಿರುವ ವಿಶೇಷ ಅಂಶವಾಗಿದೆ.
ನಗರದ ಅತ್ಯಂತ ಜನನಿ ಬೇಡ ರಸ್ತೆಗಳು ಇವುಗಳಾಗಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳೊಂದಿಗೆ ಸಂಚರಿಸಿ ವಾಹನ ಸಂಚಾರಕ್ಕೆ ಈ ಕಿರಿದಾದ ರಸ್ತೆಗಳು ತೊಡಗನ್ನು ಉಂಟು ಮಾಡಿತ್ತು.
ಈ ಕಾರಣದಿಂದಾಗಿ ಇತ್ತೀಚೆಗೆ ನಗರಸಭೆ ಅಧಿಕಾರಿಗಳು ಮೇಲ್ಕಂಡ ಎರಡು ರಸ್ತೆಗಳಲ್ಲಿ ದಶಕಗಳ ಕಾಲದಿಂದ ಅತ್ಯಂತ ಇಕ್ಕಟ್ಟಾಗಿರುವ ಬಜಾರ್ ರಸ್ತೆ ಮತ್ತು ಗಂಗಮ್ಮನ ಗುಡಿ ರಸ್ತೆಯನ್ನು ಅಗಲೀಕರಣ ಮಾಡಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಸದಾಕಾಲ ಇತ್ತು. ಕೆಲ ದಿನಗಳ ಹಿಂದೆ ಶಾಸಕ ಪ್ರದೀಪ್ ಈಶ್ವರ್ ರವರು ಈ ಬಗ್ಗೆ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು ಅತಿ ಶೀಘ್ರದಲ್ಲಿಯೇ ಕಿರಿದಾದ ಬಜಾರ್ ರಸ್ತೆ,
( ಸರ್ ಎಂ ವಿ ರಸ್ತೆ,) ಎಂದು ಕರೆಯಲಾಗುತ್ತಿದೆ ಮತ್ತು ಗಂಗಮ್ಮನ ಗುಡಿ ರಸ್ತೆ ಈ ಎರಡು ರಸ್ತೆಗಳ ಅನಧಿಕೃತ ಕಟ್ಟಡಗಳ ತೆರವು ಹಾಗೂ ನಂತರ ಚರಂಡಿ ಬೀದಿ ದೀಪ ವ್ಯವಸ್ಥೆ ಮುಂತಾದ ಸುಧಾರಿತ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಸುಮಾರು ೧೦ ಕೋಟಿ ರೂ ಮಂಜೂರು ಮಾಡಿಸುತ್ತಿದ್ದು ಅತಿ ಶೀಘ್ರದಲ್ಲಿ ಈ ಎರಡು ರಸ್ತೆಗಳನ್ನು ವಿಶಾಲ ಗೊಳಿಸಲಾಗುವುದು ಎಂದು ತಿಳಿಸಿದ್ದು ಈ ಬಗ್ಗೆ ಸಾರ್ವಜನಿಕ ಭಾಷಣದಲ್ಲಿ ತಿಳಿಸಿದ್ದರು.
ವಿಶೇಷವಾಗಿ ಗಂಗಮ್ಮನ ಗುಡಿ ರಸ್ತೆ ಮತ್ತು ಬಜಾರ್ ರಸ್ತೆ ಸರ್ ಎಂ ವಿ ರಸ್ತೆ ಗಳಲ್ಲಿ ಕೇವಲ ಒಂದು ಲಾರಿ ಅಥವಾ ಕಾರ್ ನಿಲುಗಡೆ ಆದರೆ ಅದರ ಹಿಂದೆ ಮಾರುದ್ದ ವಾಹನಗಳು ಮೇಲ್ಗಡೆ ಆಗಿ ಸಂಚಾರ ಟ್ರಾಫಿಕ್ ಜಾಮ್ ಆಗುತ್ತಿತ್ತು. ಅನೇಕ ಬಾರಿ ಈ ರೀತಿಯ ಕಿರಿಕಿರಿಯನ್ನು ನಾಗರಿಕರು ಅನುಭವಿಸುತ್ತಿದ್ದರು ಹಾಗೂ ಎಂದು ಈ ಎರಡು ರಸ್ತೆಗಳು ಅಗಲೀಕರಣ ಆಗುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಎಲ್ಲೆಡೆ ಕಂಡು ಬರುತ್ತಿತ್ತು.
ಸುಮಾರು ದಶಕಗಳ ಹಿಂದಿನಿಂದಲೂ ಈ ಎರಡು ಅನಧಿಕೃತ ನಿರ್ಮಾಣದ ಕಟ್ಟಡಗಳ ತೆರುವು ಕಾರ್ಯಾಚರಣೆ ರಾಜಕೀಯ ಕಾರಣವೂ ಸಹ ಆಗಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರು ಅನೇಕ ಬಾರಿ ಈ ಎರಡು ರಸ್ತೆಗಳ ಅಗಲೀಕರಣಕ್ಕೆ ನಾನು ಎಂದಿಗೂ ಅವಕಾಶ ಕೊಡುವುದಿಲ್ಲ ಹೀಗೆ ಅವಕಾಶ ಕೊಟ್ಟರೆ ಜೇನಿನ ಹುಟ್ಟಿಗೆ ಕಲ್ಲು ಹೊಡೆದಂತೆ ಆಗುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು.
೨೦೨೩ರ ಚುನಾವಣೆಯಲ್ಲಿ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಭವ ಗೊಂಡ ನಂತರ ನೂತನವಾಗಿ ಸಚಿವರಾಗಿ ಆಯ್ಕೆಯಾದ ಪ್ರದೀಪ್ ಈಶ್ವರ್ ರವರು ನಗರದ ಮುಂದಿನ ಜನಸಂದಣಿ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ಎರಡು ರಸ್ತೆಗಳನ್ನು ಅದಿಲೀಕರಣ ಮಾಡಿಸುತ್ತೇನೆ ಇದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೧೦ ಕೋಟಿ ಸುಮಾರು ಮಂಜೂರು ಮಾಡಿಸುತ್ತೇನೆ ಎಂದು ವಾಗ್ದಾನ ನೀಡಿದ್ದರು.
ಜನಪ್ರಿಯ ವಾಹಿನಿ ಒಂದರಲ್ಲಿ ಆಂಕರ್ ಎರಡು ರಸ್ತೆಗಳ ಅಗಲೀಕರಣ ಏಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನೆ ಮಾಡಿದಾಗ ಅವರು ನಮ್ಮ ಮಾವ ಏನಾದರೂ ಫೈನಾನ್ಸ್ ಸೆಕ್ರೆಟರಿ ಆಗಿದ್ದಾರೆ ತಕ್ಷಣ ಮಾಡಿಸುತ್ತಿದ್ದೆ ಎಂಬ ಹೇಳಿಕೆ ನೀಡುವ ಮೂಲಕ ಮತ್ತಷ್ಟು ಪ್ರಚಾರವನ್ನು ಈ ಎರಡು ರಸ್ತೆಗೆ ನೀಡಿದ್ದುನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಕೆಲ ದಿನಗಳ ಹಿಂದೆ ನೂತನವಾಗಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಬಂಡ ಜಿಲ್ಲಾಧಿಕಾರಿ ಪ್ರಭು .ಜಿ ರವರು ಸಹ ಬಜಾರ್ ರಸ್ತೆ ಎಂದು ಹಿಂದಿನ ಹೆಸರುಳ್ಳ ಸರ್ ಎಂ ವಿ ರಸ್ತೆ ಗಂಗಮ್ಮನ ಗುಡಿ ರಸ್ತೆ ಸಮಸ್ಯೆಗಳನ್ನು ತೀಕ್ಷ್ಣರೂಪದಲ್ಲಿ ಗಮನ ಹರಿಸಿ ಇದೀಗ ಈ ರಸ್ತೆಯ ಅಗಲೀಕರಣಕ್ಕೆ ಇರಬಹುದಾದ ಎಲ್ಲಾ ಅಡಿ ಆತಂಕಗಳನ್ನು ನಿವಾರಿಸಿ ಅತಿ ಶೀಘ್ರದಲ್ಲಿಯೇ ಈ ಎರಡು ರಸ್ತೆಗಳಲ್ಲಿ ಸರ್ವಜನಿಕರ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಿರುವ ಕಟ್ಟಡಗಳ ಚೆರುಗು ಅತಿ ಶೀಘ್ರದಲ್ಲಿಯೇ ಆಗುವುದು ಇದಕ್ಕೆ ಸಾರ್ವಜನಿಕರು ಹಾಗೂ ಇಲ್ಲಿನ ವರ್ತಕರು ಸಹಕರಿಸುತ್ತಾರೆ. ಅಷ್ಟೇ ಅಲ್ಲದೆ ಅವರೇ ಸ್ವಯಂ ನಗರಸಭೆ ಅಧಿಕಾರಿಗಳೊಂದಿಗೆ ಎರಡು ರಸ್ತೆಗಳಲ್ಲಿ ಸಂಚರಿಸಿ ಅಲ್ಲಿನ ಕಟ್ಟಡ ಮಾಲೀಕರೊಂದಿಗೆ ಚರ್ಚೆ ನಡೆಸುತ್ತಿದ್ದು ಇದಕ್ಕೆಲ್ಲ ಈಗ ರೆಕ್ಕೆ ಪುಕ್ಕ ಹುಟ್ಟಿಕೊಂಡಿದ್ದು ಅತಿ ಶೀಘ್ರದಲ್ಲಿಯೇ ಈ ಎರಡು ರಸ್ತೆಗಳ ಅನಧಿಕೃತ ನಿರ್ಮಾಣದ ವ್ಯಾಪ್ತಿ ಎಷ್ಟೊಂದು ಕೆಂಪು ಪೈಂಟ್ ನಲ್ಲಿ ನಮ್ಮದು ಮಾಡಿದ್ದು ಇದೀಗ ತೆರಗು ಕಾರ್ಯಾಚರಣೆ ಸನ್ನಿಹತವಾಗಿದೆ ಎಂದು ತಿಳಿದುಬಂದಿದೆ.






















