ಮುಖ್ಯಮಮತ್ರಿ ಸ್ವಜನ ಪಕ್ಷಪಾತ ಮಾಡಿಲ್ಲ

ಬೀದರ್: ಸೆ.೧೭:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತನ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆಯನ್ನು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ತೀವ್ರವಾಗಿ ಖಂಡಿಸಿದ್ದಾರೆ.
ಗೊAಡ ಹಾಗೂ ಕುರುಬ ಪದಗಳನ್ನು ಪರ್ಯಾಯ ಪದಗಳೆಂದು ಹಾಗೂ ಗೊಂಡ/ಕುರುಬ ಸಮುದಾಯವನ್ನು ಎಸ್.ಟಿ. ಎಂದು ಪರಿಗಣಿಸಬೇಕು ಎಂದು ಹಿಂದಿನ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಿದ್ದವು. ಈಗ ಅದಕ್ಕೆ ಸಂಬAಧಿಸಿದAತೆ ಪ್ರಕ್ರಿಯೆಗಳು ನಡೆಯುತ್ತಿವೆ ಅಷ್ಟೇ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಜನ ಪಕ್ಷಪಾತ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಖ್ಯಮಂತ್ರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿದರೆ ಪರಿಶಿಷ್ಟರ ಮೀಸಲು ಕಬಳಿಕೆಗೆ ದಾರಿ ಮಾಡಿಕೊಟ್ಟಂತೆ ಆಗಲಿದೆ ಎಂಬ ಹೇಳಿಕೆ ಬಾಲಿಶತನದ್ದು. ವಾಸ್ತವದ ಅರಿವಿಲ್ಲದೆ ಅವರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಒಂದೇ ಸಮುದಾಯಕ್ಕೆ ಗೊಂಡ ಹಾಗೂ ಕುರುಬ ಎಂದು ಕರೆಯಲಾಗುತ್ತದೆ. ಹೀಗಾಗಿ ಎರಡನ್ನೂ ಪರ್ಯಾಯ ಪದಗಳೆಂದು ಪರಿಗಣಿಸಬೇಕು ಎಂದು ೧೯೯೬ ರಲ್ಲಿ ಅಂದಿನ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ನಂತರ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳನ್ನು ಒಳಗೊಂಡAತೆ ಇನ್ನೊಂದು ಶಿಫಾರಸು ಕಳುಹಿಸಿತು. ಬಳಿಕ ಕೇಂದ್ರದ ನಿರ್ದೇಶನದಂತೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಮತ್ತೆ ಪ್ರಸ್ತಾವ ಕಳುಹಿಸಿಕೊಟ್ಟಿತು ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಕುರುಬರನ್ನು ಎಸ್.ಟಿ. ಎಂದು ಕರೆಯಲಾಗುತ್ತದೆ. ಹೀಗಾಗಿ ಇಡೀ ರಾಜ್ಯದ ಕುರುಬರನ್ನು ಎಸ್.ಟಿ. ಎಂದು ಪರಿಗಣಿಸಬೇಕು ಎಂದು ಕುರುಬ ಸಮುದಾಯದ ಪ್ರಮುಖರು ಮನವಿ ಮಾಡಿದಾಗ ಹಿಂದಿನ ರಾಜ್ಯ ಸರ್ಕಾರ ಮಡಿಕೇರಿಯಂತೆ ರಾಜ್ಯದ ಎಲ್ಲ ಕುರುಬರನ್ನು ಎಸ್.ಟಿ. ಎಂದು ಪರಿಗಣಿಸಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿತು ಎಂದು ಹೇಳಿದ್ದಾರೆ.
ಗೊಂಡ ಹಾಗೂ ಕುರುಬ ಪದಗಳನ್ನು ಪರ್ಯಾಯ ಪದಗಳೆಂದು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವಲ್ಲಿ ಸಿದ್ದರಾಮಯ್ಯ ಅವರು ಪಾತ್ರವೂ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಗೊಂಡ ಮತ್ತು ಕುರುಬ, ಕುರುಬ ಮತ್ತು ಎಸ್.ಟಿ. ಪರ್ಯಾಯ ಪದಗಳ ಸಂಬAಧ ಸ್ಪಷ್ಟೀಕರಣ ಬಯಸಿ ಕಳೆದ ಆಗಸ್ಟ್ ೧೪ ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಅದಕ್ಕೆ ಸಂಬAಧಿಸಿದAತೆ ಸ್ಪಷ್ಟೀಕರಣ ನೀಡಲು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದೆ. ಆದರೆ, ನಾರಾಯಣಸ್ವಾಮಿ ಅವರು ಆಧಾರ ರಹಿತ ಹೇಳಿಕೆ ಕೊಟ್ಟು ಗೊಂಡ ಸಮುದಾಯಕ್ಕೆ ನೋವು ಉಂಟು ಮಾಡಿದ್ದಾರೆ. ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಕೇಂದ್ರ ಸರ್ಕಾರ ಕೂಡಲೇ ಗೊಂಡ ಹಾಗೂ ಕುರುಬ ಪರ್ಯಾಯ ಪದಗಳೆಂದು ಪರಿಗಣಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.