ಸಿಯುಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅದ್ಧೂರಿ ಆಚರಣೆ

ಕಲಬುರಗಿ:ಫೆ.24:”ಶಿವಾಜಿ ಮಹಾರಾಜರು ಸಮಗ್ರತೆ, ಶೌರ್ಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ” ಎಂದು ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಅವರು ಸಿಯುಕೆಯಲ್ಲಿ ಸಿಯುಕೆ ಮರಾಠಿ ಮಂಡಲ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ಯಶಸ್ವಿಯಾಗಲು ನೀವು ಶಿವಾಜಿ ಮಹಾರಾಜರ ಕಾಲಾತೀತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.
ಕುಲಸಚಿವರಾದ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಡಾ. ರವಿ ಖಂಗೈ ಅವರು ಪ್ರಾಸ್ತಾವಿಕ ಮಾತನಾಡಿ, “ಕಾರ್ಯತಂತ್ರದ ಪ್ರತಿಭೆ ಶಿವಾಜಿ ಮಹಾರಾಜರ ವಿಶಿಷ್ಟತೆಯಾಗಿದೆ. ಅವರ ನವೀನ ಮಿಲಿಟರಿ ತಂತ್ರಗಳು ಮತ್ತು ಆಡಳಿತಾತ್ಮಕ ಕುಶಾಗ್ರಮತಿ ಅವರನ್ನು”ಜನರ ರಾಜ” ಎಂದು ವ್ಯಾಖ್ಯಾನಿಸಿತು” ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಡಾ. ಮುದನಾರ್ ದತ್ತ ಸರ್ಜೇರಾವ್ ಸ್ವಾಗತಿಸಿದರು, ಶ್ರೀ ಸತ್ಯಂ ಜಾಧಾವೊ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕøತಿಕ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹμÉರ್ೂೀದ್ಘಾರದ ವಾತಾವರಣ ನಿರ್ಮಾಣವಾಯಿತು. ಲಾವಣಿ ಪ್ರದರ್ಶನ, ಲೆಜಿಮ್ ನೃತ್ಯ ಮತ್ತು ಧೋಲ್ ತಾಶಾದಿಂದ ಪ್ರೇಕ್ಷಕರು ಮೋಡಿಗೊಂಡರು. ಕ್ಯಾಂಪಸ್‍ನಾದ್ಯಂತ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಜಯಂತಿಯನ್ನು ಸ್ಮರಣೀಯವಾಗಿ ಆಚರಿಸಲಾಯಿತು. ಡಾ. ಅನಿಲ್ ಕಾಂಬ್ಳೆ ಎಲ್ಲರನ್ನು ವಂದಿಸಿದರು.
ಈ ಸಂದರ್ಭದಲ್ಲಿ ಡಾ. ಅನಂತ್ ಚಿಂಚುರೆ, ಡಾ. ಪರಶುರಾಮ ಕಾಂಬ್ಳೆ, ಡಾ. ರಾಘವೇಂದ್ರ ಬೋನಾಳ, ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.