Home ಜಿಲ್ಲೆ ಕಲಬುರಗಿ ಸ್ವರಾಜ್ಯ ಸಾಮ್ರಾಜ್ಯ ಸ್ಥಾಪಕ, ಮಾದರಿ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜರು

ಸ್ವರಾಜ್ಯ ಸಾಮ್ರಾಜ್ಯ ಸ್ಥಾಪಕ, ಮಾದರಿ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜರು

ಕಲಬುರಗಿ :ಫೆ.19: ಛತ್ರಪತಿ ಶಿವಾಜಿ ಮಹಾರಾಜರು ಮರಾಠಾ ಸಾಮ್ರಾಜ್ಯದ ಸ್ಥಾಪಕ, ದಾರ್ಶನಿಕ ಆಡಳಿತಗಾರ ಮತ್ತು ಭಾರತೀಯ ಇತಿಹಾಸದ ಶ್ರೇಷ್ಠ ಯೋಧರು. ಅವರು ಗೆರಿಲ್ಲಾ ಯುದ್ಧತಂತ್ರದ (ಗನಿಮಿ ಕಾವಾ) ಮೂಲಕ ಮೊಘಲರು ಮತ್ತು ಬಿಜಾಪುರ ಸುಲ್ತಾನರ ವಿರುದ್ಧ ಹೋರಾಡಿ ‘ಹಿಂದವೀ ಸ್ವರಾಜ್ಯ’ ಸ್ಥಾಪಿಸಿದರು, ನೌಕಾಪಡೆಯನ್ನು ಬಲಪಡಿಸಿದರು, ನ್ಯಾಯಯುತ ಆಡಳಿತ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ಜಾರಿಗೆ ತಂದರು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ’ಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತೀಯ ನೌಕಾಪಡೆಯ ಪಿತಾಮಹರಾಗಿದ್ದಾರೆ. ಕರಾವಳಿ ರಕ್ಷಣೆಗಾಗಿ ಬಲವಾದ ನೌಕಾಪಡೆಯನ್ನು ನಿರ್ಮಿಸಿದರು, ಇದು ಅವರ ದೂರದೃಷ್ಟಿಗೆ ಸಾಕ್ಷಿ.
ದಕ್ಷ ಆಡಳಿತ ಮತ್ತು ನ್ಯಾಯಕ್ಕೆ ಹೆಸರುವಾಸಿ. ‘ಅಷ್ಟಪ್ರಧಾನ ಮಂಡಲ’ದ ಮೂಲಕ ಆಡಳಿತ ನಡೆಸಿದರು, ರೈತರಿಗೆ ಬೆಂಬಲ ನೀಡಿ, ಮಹಿಳೆಯರಿಗೆ ಗೌರವ ನೀಡಿದರು. ಭಾಷೆ ಮತ್ತು ಸಂಸ್ಕøತಿಯ ಸಂರಕ್ಷಣೆ ಮಾಡಿದರು. ಆಸ್ಥಾನದಲ್ಲಿ ಪರ್ಷಿಯನ್ ಬದಲು ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡಿದರು, ರಾಜವ್ಯವಹಾರ ಕೋಶವನ್ನು ಸಿದ್ಧಪಡಿಸಿದರು.
ರಾಜ್ಯದ ರಕ್ಷಣೆಗಾಗಿ ನೂರಾರು ಕೋಟೆಗಳನ್ನು ನಿರ್ಮಿಸಿದರು ಮತ್ತು ದುರಸ್ತಿ ಮಾಡಿಸಿದರು.
ಅವರ ಧೈರ್ಯ, ನಾಯಕತ್ವ ಮತ್ತು ರಾಷ್ಟ್ರಪ್ರೇಮ ಇಂದಿಗೂ ಸ್ಫೂರ್ತಿಯ ಮೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬಳಗದ ಗೌರವ ಸಲಗೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಚಂಪಾಕಲಾ ನೆಲ್ಲುರೆ ಹಾಗೂ ವಿದ್ಯಾರ್ಥಿಗಳು ಇದ್ದರು.