
ಬೀದರ್: ಇಲ್ಲಿಯ ಬೀದರ್ ಔಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘ ನಿಯಮಿತವು ೨೦೨೫-೨೬ನೇ ಸಾಲಿನ ತನ್ನ ಲಾಭದಲ್ಲಿ ಸದಸ್ಯರಿಗೆ ಶೇ ೧೦ ರಷ್ಟು ಪಾಲು ಕೊಡಲಿದೆ.
ನಗರದ ಶ್ರೀ ಗಣೇಶ ಏಜೆನ್ಸಿ ಸಮೀಪದ ಫಾರ್ಮಾ ಭವನದಲ್ಲಿ ಈಚೆಗೆ ನಡೆದ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಮಲ್ಲಪ್ಪ ಗುನ್ನಳ್ಳಿ ಈ ಘೋಷಣೆ ಮಾಡಿದರು.
೨೦೨೫-೨೬ನೇ ಸಾಲಿನಲ್ಲಿ ಸಂಘ ರೂ. ೫,೫೫,೮೪೩ ಲಾಭ ಗಳಿಸಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದಿಂದ ಸಂಘ ಪ್ರತಿ ವರ್ಷ ಲಾಭದಲ್ಲಿ ಮುನ್ನಡೆದಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಸವರಾಜ ಕೆ. ಪಾಟೀಲ, ನಿರ್ದೇಶಕ ಶಿವರಾಜ ಪಾಟೀಲ ಮಾತನಾಡಿದರು.
ನಿರ್ದೇಶಕರಾದ ಓಂರೆಡ್ಡಿ ಶಹಾಬಾದಕರ್, ವೀರಕುಮಾರ ಮಜಗೆ, ಮಹಮ್ಮದ್ ಖಾಲೀದ್ ಷರೀಫ್, ಗಜಲಕ್ಷ್ಮಿ ಎಸ್. ಸಾವಳಗಿ, ಕಲಾವತಿ ಎಸ್. ಕಾಳಗಾಪುರೆ, ಬಲಭೀಮ ಕಾಂಬಳೆ, ಅಂಬಿಕಾ ರಾಜೇಂದ್ರ ಮಣಗೀರೆ, ಪ್ರಕಾಶ್ ಬಿ. ಪಾಟೀಲ, ಮಂಜುನಾಥ ಎ. ಬಿರಾದಾರ, ಪ್ರಮುಖರಾದ ಸಂಜೀವಕುಮಾರ ನೂಕಲವಾರ, ರಾಜೇಂದ್ರ ನಮೋಶಿ, ಎಂ.ಎA. ಬೇಗ್, ಎಂ.ಡಿ. ತಾಹಾ ಕಲಿಮುಲ್ಲಾ, ಮಾದಪ್ಪ ಶಿರಶೆಟ್ಟಿ ಮತ್ತಿತರರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಮಣಗೀರೆ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕ ವೀರಕುಮಾರ ಮಜಗೆ ವಂದಿಸಿದರು.































