ವಿಜೃಂಬಣೆಯಿAದ ಜರುಗಿದ ಚನ್ನವೀರೇಶ್ವರ ಜಾತ್ರೆ

ತಾಳಿಕೋಟೆ:ಅ.೨೫: ಪಟ್ಟಣದ ಕೈಲಾಸಪೇಠೆ ಬಡಾವಣೆಯಲ್ಲಿರುವ ಪುರಾತನ ದೇವಾಲಯವಾದ ಶ್ರೀ ಚನ್ನವೀರೇಶ್ವರ ಮಹಾಸ್ವಾಮಿಗಳ ಜಾತ್ರೋತ್ಸವ ಹಾಗೂ ನೂತನ ಗೋಪುರದ ಕಳಸಾರೋಹಣವು ರವಿವಾರರಂದು ವಿಜೃಂಬಣೆಯಿAದ ಭಕ್ತಿಭಾವದೊಂದಿಗೆ ಜರುಗಿತು.
ಈ ಜಾತ್ರೋತ್ಸವ ಕುರಿತು ಕೈಲಾಸಪೇಠೆಯಲ್ಲಿರುವ ಶ್ರೀ ಚನ್ನವೀರೇಶ್ವರ ಮಹಾಸ್ವಾಮಿಗಳ ಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಜರುಗಿತಲ್ಲದೇ ನಂತರ ಸುಮಂಗಲೆಯರಿAದ ಗಂಗಸ್ಥಳದ ಮೇರವಣಿಗೆಯು ಕುಂಭಮೇಳದೊAದಿಗೆ ಶ್ರೀ ಅಂಬಾಭವಾನಿ ಮಂದಿರದಿAದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಮರಳಿ ಕೈಲಾಸಪೇಠೆಯಲ್ಲಿರುವ ಮಂದಿರಕ್ಕೆ ತಲುಪಿತು.
ಈ ಮೇರವಣಿಗೆಯಲ್ಲಿ ವೈಭಯುತವಾದ ವಿವಿಧ ವಾದ್ಯ ಮೇಳಗಳು ಹಾಗೂ ಶ್ರೀ ಚನ್ನವೀರೇಶ್ವರ ಭಾವಚಿತ್ರದ ಮೆರವಣಿಗೆಯೂ ಕೂಡಾ ಅಲಂಕೃತಗೊAಡಿತಲ್ಲದೇ ಕಳಸೋತ್ಸವ ಹಾಗೂ ಸುಮಂಗಲೆಯರ ಆರತಿ ಉತ್ಸವವು ಕೂಡಾ ಭಕ್ತಿಭಾವದೊಂದಿಗೆ ಜರುಗಿ ಬೃಹತ್ ಆಕಾರದ ಮಂದಿರದ ಆವರಣದಲ್ಲಿ ಸಮಸ್ತ ಭಕ್ತಾಧಿಗಳಿಗೆ ಅನ್ನಪ್ರಸಾದ ಮಾಡಲಾಗಿತ್ತು.
ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಗಚ್ಚಿನಮಠ ಕೈಲಾಸಪೇಠ (ಗುಳೆದಗುಡ್ಡ, ಮೈಲೇಶ್ವರ) ಪೂಜ್ಯ ಶ್ರೀ ಕಾಶಿನಾಥ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಜರುಗಿದ ಈ ಉತ್ಸವದ ನೇತೃತ್ವವನ್ನು ಶ್ರೀ ಚನ್ನವೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಎಂ.ಎಸ್.ಸರಶೆಟ್ಟಿ, ಉಪಾಧ್ಯಕ್ಷರಾದ ಪಿ.ಸಿ.ಸರಶೆಟ್ಟಿ, ಕಾರ್ಯದರ್ಶಿ ಸಿ.ಬಿ.ಸರಶೆಟ್ಟಿ, ಸಹ ಕಾರ್ಯದರ್ಶಿ ಎಂ.ಜಿ.ಸರಶೆಟ್ಟಿ, ಖಜಾಂಚಿ ಎಂ.ಬಿ.ಸರಶೆಟ್ಟಿ, ಸದಸ್ಯರಾದ ಎಸ್.ಎಂ.ಸರಶೆಟ್ಟಿ, ಆಯ್.ಆರ್.ಕಲ್ಬುರ್ಗಿ, ಎಸ್.ಎಸ್.ಸರಶೆಟ್ಟಿ, ಮೊದಲಾದವರು ವಹಿಸಿದ್ದರು.