ಚಾಂಗಲೇರಾ ಸರ್ಕಾರಿ ಶಾಲೆಯ ದುಸ್ಥಿತಿ ಕುಡಿಯುಲು ನೀರು ಕರೆಂಟ್ ಹಾಗು ರಸ್ತೆಯಿಲ್ಲಗ್ರಾಮಪಂಚಾಯತ್ ವಿರುದ್ದ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು, ಎಸ್ ಡಿ ಎಮ್ ಸಿ

ಚಿಟಗುಪ್ಪ:ಜ.7:ಗ್ರಾಮೀಣ ಭಾಗದ ಶಿಕ್ಷಣಕ್ಕಾಗಿ ಸರ್ಕಾರ ನೂರಾರು ಕೋಟಿ ಅನುದಾನ ನೀಡುತ್ತಿದ್ದರು ಕೂಡ ಸ್ಥಳೀಯ ಆಡಳಿತದ ಬೇಜವಾಬ್ದಾರಿಯಿಂದ ಶಾಲಾ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಎಂದು ತಾಲೂಕಿನ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ವೀರಶೆಟ್ಟಿ ದೇವಗಿರಿ ಆರೋಪಿಸಿದರು.

ಸುಮಾರು 90 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಸಿಗುತ್ತಿಲ್ಲ, ವಿದ್ಯುತ್ ಇಲ್ಲ, ಸಮರ್ಪಕ ರಸ್ತೆಯಿಲ್ಲ ಎಂದು ಆರೋಪಿಸಿದರು.

ಶಾಲೆ ಆವರಣದಲ್ಲಿ ಕೊಳವೆ ಬಾವಿ ಇದ್ದು ಅದರ ಮೋಟಾರ್ ಗ್ರಾಪಂ ನವರು ರಿಪೇರಿಗಾಗಿ ತೆಗೆದುಕೊಂಡು ಹೋಗಿ ಅನೇಕ ದಿನಗಳಾದರೂ ತಂದಿಲ್ಲ. ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವು ಇಲ್ಲಿದೆ ಆದರೆ ಕೊಳವೆಬಾವಿ ರಿಪೇರಿ ಆಗದ ಪರಿಣಾಮ ಮಕ್ಕಳು ಶಿಕ್ಷಕರು ಸೇರಿದಂತೆ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುತ್ತಿಲ್ಲ.

ಶಾಲಾ ಮಕ್ಕಳು ಕುಡಿಯುವ ನೀರಿಗಾಗಿ ಸುಮಾರು 500 ಮೀಟರ್ ದೂರ ನಡೆದುಕೊಂಡು ಹೋಗಿ ರಾಜ್ಯ ಹೆದ್ದಾರಿ ದಾಟಿಕೊಂಡು ಗ್ರಾಮಕ್ಕೆ ಹೋಗಿ ನೀರು ಕುಡಿದು ಬರುತ್ತಿದ್ದಾರೆ. ಬಿಸಿ ಊಟ ಸಿಬ್ಬಂದಿಗಳು ಕೊಡ ಹೊತ್ತು ನೀರನ್ನು ತರುತ್ತಿದ್ದಾರೆ. ಅನೇಕ ಬಾರಿ ಗ್ರಾಮ ಪಂಚಾಯತ್ ಹಾಗು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ವಿದ್ಯಾರ್ಥಿಗಳು ಹಾಗೂ ಪೆÇೀಷಕರೊಂದಿಗೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಟಿವಿ ಹಾಗೂ ಶಿಕ್ಷಕರ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆಯಿದೆ, ಆದರೆ ವಿದ್ಯುತ್ ಸಂಪರ್ಕ ಇರದ ಕಾರಣ ಇವುಗಳ ಬಳಕೆ ಇಲ್ಲವಾಗಿದೆ. ಶಿಕ್ಷಕರ ಹಾಜರಾತಿಗಾಗಿ ಬಯೋಮೆಟ್ರಿಕ್ ಯಂತ್ರಕ್ಕೆ ಬ್ಯಾಟರಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿದ ಅವರು ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತಂದು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ
ಗ್ರಾಮ ಪಂಚಾಯತ್ ಅಧ್ಯಕ್ಷ ಗಾಳೆಮ್ಮಾ ಲಾಲಪ್ಪ ಹಸಿರು ಗುಂಡಗಿ