
ಅಫಜಲಪುರ:ಬಿಜೆಪಿ ಮಂಡಲ ಯುವ ಮೋರ್ಚಾ ನೂತನ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.ಯುವಶಕ್ತಿಯಿಂದಲೇ ಬದಲಾವಣೆ ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಹೇಳಿದರು.
ಪಟ್ಟಣದ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಎಸ್ ಐಆರ್ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು,ಒಟ್ಟು 2,50,235 ಮತದಾರರ ಪೈಕಿ 38,925(ಶೇ.16) ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. 105645 ಗಂಡು ಮತದಾರರು ಹಾಗೂ 98738 ಹೆಣ್ಣು ಮತದಾರರು ಅಲ್ಲದೇ ಇತರೆ ಮತದಾರರು 18 ಜನ ಹೊಂದಿದ್ದಾರೆ.6081 ಮತದಾರರು ಮರಣ ಹೊಂದಿದ್ದಾರೆ.25413 ಶಾಶ್ವತ ಸ್ಥಳಾಂತರ ಗೊಂಡಿದ್ದಾರೆ. 2024 ಗೈರು ಹಾಜರಿ ಹೊಂದಿದ್ದಾರೆ. 3012 ಡಬಲ್ ಹೊಂದಿದ ಮತದಾರರು, 2395 ಇತರೆ ಮತದಾರರು ಸೇರಿ ಒಟ್ಟು 38925 ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.ಹೀಗಾಗಿ ಇನ್ನೂ 6909 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಮತದಾನ ಉಳಿಸಿಕೊಳ್ಳುವುದರ ಜತೆಗೆ ಅಕ್ಕ ಪಕ್ಕದ ಮನೆಯವರ ಮತದಾನವು ಇದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಬೇಕು,ಒಂದು ವೇಳೆ ಇಲ್ಲದಿದ್ದರೆ ಮತದಾನ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಹಾಗೂ ಅಫಜಲಪುರ ಮಂಡಲ ಅಧ್ಯಕ್ಷ ವಿದ್ಯಾಧರ ಮಂಗಳೂರು ಮಾತನಾಡಿ,ಮಂಡಲ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಮುಂದಾಗಬೇಕು ಅಲ್ಲದೇ ಎಸ್‍ಐಆರ್ ಪ್ರಕ್ರಿಯೆಯಿಂದ ಏನಾದರೂ ಗೊಂದಲಗಳು ಇದ್ದರೆ ಅಥವಾ ಬೇರೆ ರಾಜ್ಯದ ಜನರ ಹೆಸರು ಅನಧಿಕೃತವಾಗಿ ನೋಂದಣಿ ಆಗಿದ್ದರೆ ತಕ್ಷಣವೇ ಚುನಾವಣಾಧಿಕಾರಿಗೆ ದೂರು ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ,ಆನಂದ ಪಾಟೀಲ್,ಮಲ್ಲಿಕಾರ್ಜುನ ಲಿಂಗದಹಳ್ಳಿ, ವಿಶ್ವನಾಥ ರೇವೂರ, ಬೀರಣ್ಣ ಕಲ್ಲೂರ, ಶರಣು ಪದಕಿ,ಧಾನು ಪತಾಟೆ,ಶೈಲೇಶ್ ಗುಣಾರಿ,ಸಚೀನ್ ರಾಠೋಡ,ಸುರೇಖಾ ಪದಕಿ,ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ!
ಅಫಜಲಪುರ ಬಿಜೆಪಿ ಮಂಡಲ ಯುವ ಮೋರ್ಚಾಗೆ ಬಸವರಾಜ ಮಾಲಗತ್ತಿ (ಅಧ್ಯಕ್ಷ), ಅಂಬರೀಶ ಕಾಮಶೆಟ್ಟಿ, ಸಂಜು ಬಿರಾದಾರ (ಉಪಾಧ್ಯಕ್ಷರು), ಪುಟ್ಟು ಪಾಟೀಲ, ಕಾಶಿನಾಥ ತಳವಾರ (ಪ್ರಧಾನ ಕಾರ್ಯದರ್ಶಿ), ಅಂಬರೀಶ್ ಪಟ್ಟಣ, ಸಿದ್ಧರಾಮ ಖೇಡ, ಪ್ರೀತು ಸ್ವಾಮಿ ಸ್ಟೇಷನ್ ಗಾಣಗಾಪುರ (ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.





























