Home ಜಿಲ್ಲೆ ಕಲಬುರಗಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿ ನಾಯಕ ಚಂದ್ರಶೇಖರ ಆಜಾದ್

ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿ ನಾಯಕ ಚಂದ್ರಶೇಖರ ಆಜಾದ್

ಕಲಬುರಗಿ :ಫೆ.27: “ದುಷ್ಮನೋಂಕಿ ಗೊಲಿಯೂಂಕಾ ಸಾಮನಾ ಹಮ್ ಕರೆಂಗೇ, ಆಜಾದ್ ಹೀ ರಹೇಂಗೆ, ಆಜಾದ್ ಹೀ ರಹೇಂಗೇ” ಎಂಬ ಪ್ರತಿಜ್ಞೆಯೊಂದಿಗೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ್ಯದ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಚಂದ್ರಶೇಖರ ಆಜಾದ್ ಅವರ 95ನೇ ಹುತಾತ್ಮ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ, ಅವರು ಮಾತನಾಡುತ್ತಿದ್ದರು. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಮುನ್ನಡೆಸಿದ ಅವರು, 1931ರಲ್ಲಿ ಅಲಹಾಬಾದ್‍ನ ಆಲ್ಫ್ರೆಡ್ ಪಾರ್ಕ್‍ನಲ್ಲಿ ಶರಣಾಗದೆ ಸ್ವತಃ ಗುಂಡು ಹಾರಿಸಿಕೊಂಡು ಹುತಾತ್ಮರಾದರು. ನನ್ನ ಹೆಸರು ‘ಆಜಾದ್’ ಇದೆ ಎಂದು ಬ್ರಿಟಿಷರ ವಿರುದ್ಧ ಹೋರಾಡಿ, ದೇಶಕ್ಕಾಗಿ ವೀರ ಮರಣನಪ್ಪಿದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಅವರ ದೇಶಪ್ರೇಮ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಹಾಗೂ ಬಳಗದ ಗೌರವ ಸಲಹೆಗಾರ ಸೇವಕ ಶಿವನ ಎಸ್. ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು.