ಗುರುಮಠಕಲ್,ಸೆ.೧೭: ತಾಲೂಕಿನ ಚಂಡರಕಿ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
೧೯೪೮ ಸೆ. ೧೭ ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ನಿಜಾಮರ ಆಡಳಿತವನ್ನು ಕೊನೆಗಳಿಸಿದ ಸುದಿನ, ಹಾಗೂ ಶ್ರೀ ವಿಶ್ವಕರ್ಮ ಜಯಂತಿ ಯನ್ನು ಆಚರಿಸಲಾಯಿತು
ಈ ವೇಳೆ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಸಹಯೋಗದಲ್ಲಿ ಸ್ವಚ್ಛತೆಯ ಸೇವಾವಿಧಿಯನ್ನು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು ಬೋಧಿಸಿದರು. ಗ್ರಾ. ಪಂ. ಅಧ್ಯಕ್ಷರಾದ ದೇವಮ್ಮ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಪತ್ತಾರ, ಗ್ರಾ. ಪಂ. ಸಿಬ್ಬಂದಿ ಯವರು, ಸರ್ವಸದಸ್ಯರು, ಗ್ರಂಥಪಾಲಕ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಶಾಲಾಮಕ್ಕಳು ಇದ್ದರು.























