
ಬೆಂಗಳೂರು,ಜೂ.೫-ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಘಟನೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ರ್‍ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ೧೧ ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಬಗ್ಗೆ ಮಾತನಾಡಿ ನನ್ನ ಬಳಿ ಗೇಟ್ ಸಂಖ್ಯೆ ೩ ಕ್ಕೆ ಹೋಗಲು ಪಾಸ್ ಇತ್ತು.
ಗೇಟ್ ಸಂಖ್ಯೆ ೩ ತಲುಪಲು ನನಗೆ ಸಮಯವಿರಲಿಲ್ಲ, ಅಷ್ಟೊಂದು ಜನರು ಜಮಾಯಿಸಿದ್ದರು. ನಾನು ಗೇಟ್ ಸಂಖ್ಯೆ ೧೦ ಕ್ಕೆ ಹೋದೆ, ಮತ್ತು ಅಲ್ಲಿ ತುಂಬಾ ಜನರು ಸೇರಿದ್ದರು. ಜನಸಂದಣಿಯಲ್ಲಿ ಸಿಲುಕಿಕೊಂಡ ನಂತರ ನನಗೆ ಉಸಿರಾಟದ ತೊಂದರೆ ಉಂಟಾಯಿತ್ತು ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ೧೧ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ೫೦ ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.