
ಬಾದಾಮಿ,ಜ.೧೧: ಬರುವ ಜ.೧೯, ೨೦, ೨೧ ರಂದು ಮೂರು ದಿನಗಳ ಕಾಲ ಚಾಲುಕ್ಯ ಉತ್ಸವ-೨೦೨೬ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಾಗಲಕೋಟ ವಿಭಾಗಾಧಿಕಾರಿ ಸಂತೋಷ ಜಗಲಾಸರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಚಾಲುಕ್ಯ ಉತ್ಸವ-೨೦೨೬ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದರಿಂದ ಭದ್ರತೆ ಸೇರಿದಂತೆ ಎಲ್ಲವೂ ಯಾವುದೇ ಲೋಪವಾಗದಂತೆ ಮುನ್ನಚ್ಚರಿಕೆ ವಹಿಸಿ ತಯಾರಿ ಮಾಡಬೇಕು. ಸಮಯ ಕಡಿಮೆ ಇರುವುದರಿಂದ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಉತ್ಸವ ಯಶಸ್ವಿಗೆ ಹಗಲಿರುಳು ಕೆಲಸ ಮಾಡಬೇಕು ಎಂದರು.
ಕ್ರೀಡೆ, ವಿಚಾರಗೋಷ್ಟಿ, ವಿಚಾರಗೋಷ್ಟಿ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಾಲುಕ್ಯ ನಡಿಗೆ ಆಯೋಜನೆಗೆ ಯೋಜನೆ ಸಿದ್ದಪಡಿಸಬೇಕು. ಅಗತ್ಯ ಸಾರಿಗೆ ಸೇವೆ, ನಗರದ ಎಲ್ಲ ಪ್ರವೇಶ ದ್ವಾರ, ವಿದ್ಯುತ್ ಕಂಬಗಳಿಗೆ ಲೈಟಿಂಗ್ ವ್ಯವಸ್ಥೆ, ಅಗತ್ಯ ವ್ಯಾಪಕ ಪ್ರಚಾರದ ಸಲುವಾಗಿ ಬ್ಯಾನರ್, ಕರಪತ್ರ, ಮಾಧ್ಯಮಗಳಲ್ಲಿ ಕಾರ್ಯಕ್ರಮದ ವರದಿ ಬರುವಂತೆ ಮಾಡಬೇಕು ಎಂದು ಭಾಗವಹಿಸಿದ ಸಭಿಕರು ಸಲಹೆ ನೀಡಿದರು.
ಬಾದಾಮಿ, ಗುಳೇದಗುಡ್ಡ ಪ್ರಭಾರ ತಹಶೀಲ್ದಾರ ಎಸ್.ಬಿ.ಬೊಮ್ಮನ್ನವರ, ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರನಗೌಡ ಎಸ್.ಕರಿಗೌಡರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಅಶೋಕ ಕೋಟನಕರ, ಪುರಸಭೆ ಮಾಜಿ ಅಧ್ಯಕ್ಷ ಪಾಂಡು ಕಟ್ಟಿಮನಿ, ಮಾಜಿ ಸದಸ್ಯ ಶಂಕರ ಕನಕಗಿರಿ, ಭೀಮಸಿ ಕಮ್ಮಾರ, ಸಿಪಿಐ ಕರೆಪ್ಪ ಬನ್ನೆ, ಗ್ಯಾರಂಟಿ ಯೋಜನಾ ಅನುಷ್ಟಾಣ ಸಮಿತಿ ಅಧ್ಯಕ್ಷ ಮಾಗುಂಡಪ್ಪ ಬೂದಿಹಾಳ, ಸದಸ್ಯ ಶಿವಾನಂದ ಜಾಬನ್ನವರ, ಪಿ.ಎಸ್.ಐ.ಹನಮಂತ ನೆರಳೆ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಎಇಇ ಯಲ್ಲಪ್ಪ ಆಡಿನ, ಮುಖ್ಯಾಧಿಕಾರಿ ಬಂದೆನವಾಜ ಡಾಂಗೆ, ಎಚ್.ಕೆ.ಹುಡೇದ, ಶಿವುಕುಮಾರ ಹಿರೇಮಠ, ಎಂ.ಐ.ಬಾರಾವಲಿ, ಹನಮಂತ ಅಪ್ಪನ್ನವರ, ಭರಮಪ್ಪ ಕಾಟನ್ನವರ, ಬಸವರಾಜ ತಳವಾರ, ಬಿ.ಎಫ್.ಹೊರಕೇರಿ,
ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಘಟಕ ವ್ಯವಸ್ಥಾಪಕ ಅಶೋಕ ಕೋರಿ, ಆರ್.ಬಿ.ಸಂಕದಾಳ, ಸೂಚನೆಗಳನ್ನು ನೀಡಿದರು.























